ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಮಚ್ಚಿನ ಸರ್ಕಾರಿ ಪ್ರೌಢ ಶಾಲೆಗೆ ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆ ಇವರು ಕರ್ನಾಟಕ ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ “ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ 2024” ಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಅದರಲ್ಲಿ ಆಯ್ದ 100 ಶಾಲೆಗಳ ಪೈಕಿ ಮಚ್ಚಿನ ಸರಕಾರಿ ಪ್ರೌಢ ಶಾಲೆ ಆಯ್ಕೆ ಆಗಿರುವುದು ಬೆಳ್ತಂಗಡಿ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.

ಈ ಪ್ರಶಸ್ತಿಯನ್ನು ಮಚ್ಚಿನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಸ್. ಪ್ರಕಾಶ ನಾಯ್ಕ್ ಇವರು ಜು.27 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ,ಸತ್ಯಸಾಯಿ ಗ್ರಾಮದಲ್ಲಿ ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ದಿವ್ಯ ಸಾನಿಧ್ಯದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿಯು ರೂಪಾಯಿ ಹತ್ತು ಸಾವಿರ ನಗದು ಪುರಸ್ಕಾರವನ್ನು ಹೊಂದಿದೆ

Related posts

ಮೇಲಂತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಹರೀಶ್ ಸಾಲ್ಯಾನ್, ಉಪಾಧ್ಯಕ್ಷರಾಗಿ ಆನಂದ ಗೌಡ ಬಿ ಆಯ್ಕೆ

Suddi Udaya

ರಾಜಕೇಸರಿ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ

Suddi Udaya

ಮಂಗಳೂರುನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗಾಗಿ ವಕೀಲರ ಸಂಘದಿಂದ ಸಮಾಲೋಚನಾ ಸಭೆ: ಮಂಗಳೂರಿನಲ್ಲಿ ನಮಗೆ ಬೇಕು ಹೈಕೋರ್ಟ್ ಪೀಠ: ಧನಂಜಯ್ ರಾವ್

Suddi Udaya

ಬಾವಿ ಒಳಗೆ ನೀಲಿ ಬಣ್ಣ ನೀರು ಸುತ್ತಮುತ್ತ ಕೆಂಪು ನೀರು

Suddi Udaya

ಡಾ|| ಹೆಗ್ಗಡೆಯವರಿಂದ ಹುಣ್ಸೆಕಟ್ಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!