April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ವತಿಯಿಂದ ವಾಕರ್ ವಿತರಣೆ

ಬಳಂಜ: ಬೆಳ್ತಂಗಡಿ ತಾಲೂಕಿನ ಹೆಸರಾಂತ ಭಜನೆ ಮಂಡಳಿಗಳಲ್ಲಿ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಒಂದು. ಈ ತಂಡವು ಕೇವಲ ಭಜನೆಯನ್ನು ಮಾತ್ರವಲ್ಲದೆ ಸಮಾಜಮುಖಿ ಕೆಲಸ, ಅಗತ್ಯ ವಸ್ತುಗಳ ಪೂರೈಕೆ, ಧಾರ್ಮಿಕತೆ ಸಾಂಸ್ಕೃತಿಕತೆ, ಮುಂತಾದವುಗಳಲ್ಲಿ ತೊಡಗಿಸಿಕೊಂಡಿದೆ. ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ತಂಡದ ಸದಸ್ಯರಾದ ಅದ್ವಿತ್ ಮತ್ತು ಕೃತಿ ಅವರ ಪೋಷಕರಾದ ವೇದಾವತಿ ಅವರ ತಾಯಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ಪೆಟ್ಟಾಗಿದ್ದು ಈಗಾಗಲೇ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿ ಚೇತರಿಸಿಕೊಂಡಿದ್ದಾರೆ.

ಆದರೆ ಅವರಿಗೆ ಇನ್ನೊಬ್ಬರ ಸಹಾಯವಿಲ್ಲದೆ ನಡೆದಾಡಲು ಕಷ್ಟವಾಗುತ್ತಿದ್ದು ಇದೀಗ ಅವರಿಗೆ ನಡೆದಾಡಲು ವಾಕರ್ ನ ಅವಶ್ಯಕತೆ ಇದ್ದು ಅದನ್ನು ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಆರೋಗ್ಯ ಸೇವಾ ಎಂಟನೇ ಯೋಜನೆಯ ಮೂಲಕ ಜು.28ರಂದು ಅವರಿಗೆ ಹಸ್ತಾಂತರ ಮಾಡಲಾಯಿತು.

ಈ ಸೇವಾ ಯೋಜನೆಗೆ ಯುವ ಉದ್ಯಮಿಗಳಾದ ಎಗ್ರೀನ್ ಬಯೋಟೆಕ್ ಸಂಸ್ಥಾಪಕರು ಅಶ್ವಥ್ ಹೆಗ್ಡೆ ಬಳಂಜ ಇವರು ಕೂಡ ಕೈ ಜೋಡಿಸಿದ್ದು, ವೇದಾವತಿ ಅವರ ಮನೆಗೆ 30 ಕೆಜಿ ಅಕ್ಕಿ ಮತ್ತು ಎಲ್ಲಾ ದಿನಸಿ ಸಾಮಗ್ರಿಗಳನ್ನೂ ನೀಡಲು ಸಹಾಯಹಸ್ತ ನೀಡಿದರು. ಈ ಸಂದರ್ಭದಲ್ಲಿ ಮಂಡಳಿಯ ಸಂಚಾಲಕರು ಹರೀಶ್ ವೈ ಚಂದ್ರಮ, ಅದ್ಯಕ್ಷರು ಜ್ಯೋತಿ ಪೂಜಾರಿ, ಗುರುಗಳು ಮಾನ್ಯ ಹಾಗೂ ತಂಡದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ತಂಡದ ಪೋಷಕರು ಹಾಜರಿದ್ದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪಾಲಕಾರೊಂದಿಗೆ ಸಂವಾದ ಕಾರ್ಯಕ್ರಮ

Suddi Udaya

ಮುಗುಳಿ ಅಂಗನವಾಡಿ ಕೇಂದ್ರದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ತಾಲೂಕು ಭಜನಾ ಪರಿಷತ್ ನ ಲಾಯಿಲ ವಲಯದ ಭಜನಾ ಮಂಡಳಿಗಳ ಪದಾದಿಕಾರಿಗಳ ಸಭೆ

Suddi Udaya

ಬೆಳ್ತಂಗಡಿ ಮಾದರಿ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ

Suddi Udaya

ವಲಯ ಮಟ್ಟದ ಬಂಟರ ಕ್ರೀಡಾಕೂಟ: ಪ್ರಜನ್ ಶೆಟ್ಟಿ ಮುಂಡಾಜೆ ಪ್ರಥಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬಸ್ಥರಿಂದ ಮತ ಚಲಾವಣೆ

Suddi Udaya
error: Content is protected !!