September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಮೇಲಂತಬೆಟ್ಟು ಗ್ರಾ.ಪಂ. ಸಹಭಾಗಿತ್ವದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮತ್ತು ವನಮಹೋತ್ಸವ ದಿನಾಚರಣೆ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮತ್ತು ವನಮಹೋತ್ಸವ ದಿನಾಚರಣೆ ಕಾರ್ಯಕ್ರಮವು ಮೇಲಂತಬೆಟ್ಟು ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಬೆಳ್ತಂಗಡಿ ಲಯನ್ ಕ್ಲಬ್ ಅಧ್ಯಕ್ಷ ಲ| ದೇವದಾಸ್ ಶೆಟ್ಟಿ , ಎಮ್.ಜೆ.ಎಫ್ .ಲಯನ್ 1 ರ ವಲಯಾಧ್ಯಕ್ಷ ಲ| ಉಮೇಶ್ ಶೆಟ್ಟಿ ಎಮ್.ಜೆ.ಎಫ್ , .ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಹೆಗ್ಡೆ, ಪಂಚಾಯತ್ ಕಾರ್ಯದರ್ಶಿ ನಿರ್ಮಲ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ರವೀಂದ್ರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೇನಾನಿ ಮೇಜರ್ ಸುಬೇದಾರ್ ಪ್ರವೀಣ್ ಶೆಣೈ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯ ಲ| ಅಶೋಕ್ ಬಿ ಪಿ ಮಾಡಿದರು. ಲ| ದತ್ತಾತ್ರೇಯಗೊಲ್ಲ, ಲ| ನಾಣ್ಯಪ್ಪ ನ್ಯಾಕ್ ಲ| ಸುಂದರಿ ನಾಣ್ಯಪ್ಪ ನ್ಯಾಕ್,ಲ| ಸುರೇಶ್ ಶೆಟ್ಟಿ ಲಾಯಿಲ.ಮಾಜಿ ಯೋಧರಾದ ಲ| ಜಗನಾಥ್ ಶೆಟ್ಟಿ ಉಜಿರೆ.ಪೂರ್ವಾಧ್ಯಕ್ಷರಾದ ಲ| ಹೇಮಂತ್ ರಾವ್ ಎರ್ಡೂರ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಕಾರ್ಯಕ್ರಮಕ್ಕೆ ಸಹಕರಿಸಿದರು.

ಮಾಜಿ ಪ್ರಾಂತ್ಯಾಧ್ಯಕ್ಷರಾದ ಲ| ವಸಂತ್ ಶೆಟ್ಟಿ ಶ್ರದ್ಧಾ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿಗಳಾದ ಲ| ಕಿರಣ್ ಕುಮಾರ್ ಶೆಟ್ಟಿ ಧನ್ಯವಾದ ಸಲ್ಲಿಸಿದರು. ಬಳಿಕ ಗಿಡನೆಟ್ಟು ನಂತರ ಪರಿಸರದ ಜನರಿಗೆ ಹಣ್ಣು ಹಂಪಲಿನ ಗಿಡವನ್ನು ವಿತರಿಸಲಾಯಿತು. ಪಂಚಾಯತ್ ಸದಸ್ಯರುಗಳು ಸಂಘದ ಸದಸ್ಯರು ಪದಾಧಿಕಾರಿಗಳು, ಉಪಸ್ಥಿತರಿದ್ದು ಸಹಕರಿಸಿದರು.

Related posts

ಬಳಂಜ: ಅವ್ಯಾಚವಾಗಿ ಬೈದು ಹಲ್ಲೆ ಆರೋಪ – ಬಳಂಜ ಪ್ರಕಾಶ್ ಶೆಟ್ಟಿಯವರಿಂದ‌ ಪೊಲೀಸರಿಗೆ ದೂರು

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧಜಲ ಅಭಿಯಾನ: ಡಾ| ಡಿ ವೀರೇಂದ್ರ ಹೆಗ್ಗಡೆಯವರಿಂದ ಕರಪತ್ರ ಬಿಡುಗಡೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ಉಪ್ಪಿನಂಗಡಿ-ಕದಿಕಾರು ಶ್ರೀ ಚಂದ್ರನಾಥ ಸ್ವಾಮಿ ಬಸದಿ ಪಂಚಕಲ್ಯಾಣ ಮಹೋತ್ಸವ

Suddi Udaya

ಕೊಯ್ಯೂರು : ಆದೂರು ಪೆರಲ್ ನಲ್ಲಿ ಕುಣಿತ ಭಜನೆ ತರಬೇತಿ ಉದ್ಘಾಟನೆ

Suddi Udaya

ಮಡಂತ್ಯಾರು ವಲಯದ ಬಂಟರ ಸಂಘದ ಕ್ರೀಡೋತ್ಸವ 2025

Suddi Udaya
error: Content is protected !!