ನಡ: ಇಲ್ಲಿಯ ನಡ ಗ್ರಾಮದ ಅಂತ್ರಾಯಪಲ್ಕೆ ನಿವಾಸಿ ಶ್ಯಾಮಸುಂದರ್ ಅವರ ಮನೆಯ ಬಳಿಯಲ್ಲಿ ರಬ್ಬರ್ ತೋಟದ ಮೂಲಕ ಮಳೆ ನೀರು ಹರಿದು ಬಂದು ಗುಡ್ಡ ಕುಸಿತಕ್ಕೊಳಗಾಗಿದ್ದು, ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿದೆ. ಇದರಿಂದಾಗಿ ಮನೆಗೆ ಅಪಾಯವಾಗಬಹುದೆಂಬ ಭೀತಿ ಎದುರಾಗಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಸಂಜೆ ಮನೆಯ ಸಮೀಪ ಎತ್ತರ ಪ್ರದೇಶದಲ್ಲಿರುವ ರಬ್ಬರ್ ತೋಟದಿಂದ ಮಳೆ ನೀರು ರಭಸವಾಗಿ ಹರಿದು ಕೆಳಗೆ ಬಂದಿದೆ. ಇದರಿಂದ ಮನೆಯ ಸಮೀಪದ ಗುಡ್ಡ ಕುಸಿತಗೊಂಡು ಮಣ್ಣು ಸಹಿತ ನೀರು
ಮನೆಯ ಅಂಗಲದವರೆಗೆ ಬಂದಿದೆ. ರಬ್ಬರ್ ತೋಟದಿಂದ ಮಣ್ಣು ಸಹಿತಿ ನೀರು ಬರುತ್ತಿರುವುದರಿಂದ ರಬ್ಬರ್ ಮರಗಳಿಗೆ ಸಮಸ್ಯೆ ಕಾಡಿದೆ. ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿ ಹಾನಿ ಉಂಟಾಗಿದೆ. ರಬ್ಬರ್ ತೋಟ ಎತ್ತರದಲ್ಲಿದ್ದು, ಒಮ್ಮೆಲೆ ನೀರು ಹರಿದು ಬಂದು ಈ ಘಟನೆ ನಡೆದಿದೆ ಎಂದು ಶ್ಯಾಮಸುಂದರ್ ಮಾಹಿತಿ ನೀಡಿದ್ದಾರೆ.