September 6, 2026
ಗ್ರಾಮಾಂತರ ಸುದ್ದಿ

ನಿರಂತರ ಮಳೆ: ನಡ ಅಂತ್ರಾಯಪಲ್ಕೆಯ ಗುಡ್ಡ ಕುಸಿತ- ಶ್ಯಾಮ್‌ಸುಂದರ್‌ರ ಮನೆಯ ಕಂಪೌಂಡ್‌ಗೆ ಹಾನಿ

ನಡ: ಇಲ್ಲಿಯ ನಡ ಗ್ರಾಮದ ಅಂತ್ರಾಯಪಲ್ಕೆ ನಿವಾಸಿ ಶ್ಯಾಮಸುಂದರ್ ಅವರ ಮನೆಯ ಬಳಿಯಲ್ಲಿ ರಬ್ಬರ್ ತೋಟದ ಮೂಲಕ ಮಳೆ ನೀರು ಹರಿದು ಬಂದು ಗುಡ್ಡ ಕುಸಿತಕ್ಕೊಳಗಾಗಿದ್ದು, ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿದೆ. ಇದರಿಂದಾಗಿ ಮನೆಗೆ ಅಪಾಯವಾಗಬಹುದೆಂಬ ಭೀತಿ ಎದುರಾಗಿದೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಸಂಜೆ ಮನೆಯ ಸಮೀಪ ಎತ್ತರ ಪ್ರದೇಶದಲ್ಲಿರುವ ರಬ್ಬರ್ ತೋಟದಿಂದ ಮಳೆ ನೀರು ರಭಸವಾಗಿ ಹರಿದು ಕೆಳಗೆ ಬಂದಿದೆ. ಇದರಿಂದ ಮನೆಯ ಸಮೀಪದ ಗುಡ್ಡ ಕುಸಿತಗೊಂಡು ಮಣ್ಣು ಸಹಿತ ನೀರು

ಮನೆಯ ಅಂಗಲದವರೆಗೆ ಬಂದಿದೆ. ರಬ್ಬರ್ ತೋಟದಿಂದ ಮಣ್ಣು ಸಹಿತಿ ನೀರು ಬರುತ್ತಿರುವುದರಿಂದ ರಬ್ಬರ್ ಮರಗಳಿಗೆ ಸಮಸ್ಯೆ ಕಾಡಿದೆ. ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿ ಹಾನಿ ಉಂಟಾಗಿದೆ. ರಬ್ಬರ್ ತೋಟ ಎತ್ತರದಲ್ಲಿದ್ದು, ಒಮ್ಮೆಲೆ ನೀರು ಹರಿದು ಬಂದು ಈ ಘಟನೆ ನಡೆದಿದೆ ಎಂದು ಶ್ಯಾಮಸುಂದರ್ ಮಾಹಿತಿ ನೀಡಿದ್ದಾರೆ.

Related posts

ತ್ರೋಬಾಲ್ ಪಂದ್ಯಾಟ: ವಾಣಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕ – ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಕೋಟಕ್ ಲೈಫ್ 2ನೇ ವರ್ಷಕ್ಕೆ ಪಾದಾರ್ಪಣೆ

Suddi Udaya

ಬೆಳ್ತಂಗಡಿಯ ಹಲವು ಕಡೆ ಆಲಿಕಲ್ಲು ಮಳೆ

Suddi Udaya

ಶ್ರೀ ರಾಮ ಕ್ಷೇತ್ರ ಶ್ರೀಮಠದ ಸದ್ಗುರು ಸ್ವಾಮಿಗಳನ್ನು ಉತ್ತರಕಾಂಡದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದ ಹರಿದ್ವಾರದ ಶಾಸಕ ಮದನ ಕೌಸಿಕ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಚಿರತೆ ಆತಂಕ: ಮಳೆಗಾಲದಲ್ಲಿ ಪ್ರವಾಸಿಗರಿಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಾಗೂ ವಿಜಯ ದಶಮಿ ಉತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮ

Suddi Udaya
error: Content is protected !!