25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿ

ನಿರಂತರ ಮಳೆ: ನಡ ಅಂತ್ರಾಯಪಲ್ಕೆಯ ಗುಡ್ಡ ಕುಸಿತ- ಶ್ಯಾಮ್‌ಸುಂದರ್‌ರ ಮನೆಯ ಕಂಪೌಂಡ್‌ಗೆ ಹಾನಿ

ನಡ: ಇಲ್ಲಿಯ ನಡ ಗ್ರಾಮದ ಅಂತ್ರಾಯಪಲ್ಕೆ ನಿವಾಸಿ ಶ್ಯಾಮಸುಂದರ್ ಅವರ ಮನೆಯ ಬಳಿಯಲ್ಲಿ ರಬ್ಬರ್ ತೋಟದ ಮೂಲಕ ಮಳೆ ನೀರು ಹರಿದು ಬಂದು ಗುಡ್ಡ ಕುಸಿತಕ್ಕೊಳಗಾಗಿದ್ದು, ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿದೆ. ಇದರಿಂದಾಗಿ ಮನೆಗೆ ಅಪಾಯವಾಗಬಹುದೆಂಬ ಭೀತಿ ಎದುರಾಗಿದೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಸಂಜೆ ಮನೆಯ ಸಮೀಪ ಎತ್ತರ ಪ್ರದೇಶದಲ್ಲಿರುವ ರಬ್ಬರ್ ತೋಟದಿಂದ ಮಳೆ ನೀರು ರಭಸವಾಗಿ ಹರಿದು ಕೆಳಗೆ ಬಂದಿದೆ. ಇದರಿಂದ ಮನೆಯ ಸಮೀಪದ ಗುಡ್ಡ ಕುಸಿತಗೊಂಡು ಮಣ್ಣು ಸಹಿತ ನೀರು

ಮನೆಯ ಅಂಗಲದವರೆಗೆ ಬಂದಿದೆ. ರಬ್ಬರ್ ತೋಟದಿಂದ ಮಣ್ಣು ಸಹಿತಿ ನೀರು ಬರುತ್ತಿರುವುದರಿಂದ ರಬ್ಬರ್ ಮರಗಳಿಗೆ ಸಮಸ್ಯೆ ಕಾಡಿದೆ. ಮನೆಯ ಕಂಪೌಂಡ್ ಕುಸಿತಕ್ಕೊಳಗಾಗಿ ಹಾನಿ ಉಂಟಾಗಿದೆ. ರಬ್ಬರ್ ತೋಟ ಎತ್ತರದಲ್ಲಿದ್ದು, ಒಮ್ಮೆಲೆ ನೀರು ಹರಿದು ಬಂದು ಈ ಘಟನೆ ನಡೆದಿದೆ ಎಂದು ಶ್ಯಾಮಸುಂದರ್ ಮಾಹಿತಿ ನೀಡಿದ್ದಾರೆ.

Related posts

ಬಂದಾರು: ಮೈರೋಳ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya

ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ಬೆಳ್ತಂಗಡಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ಹಾಗೂ ಮಹಿಳಾ ಸಂಘ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ : ಪರಮ ಪೂಜ್ಯ ಶ್ರೀ ಪೂರ್ಣಾನಂದ ಸ್ವಾಮಿಗಳ ಆರಾಧನಾ ಮಹೋತ್ಸವ

Suddi Udaya

ಗುರುವಾಯನಕೆರೆ ಪ್ರಾ.ಕೃ.ಪ.ಸ. ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಕೂಕ್ರಬೆಟ್ಟು ಸರ್ಕಾರಿ ಶಾಲೆ: ಸ್ಮಾರ್ಟ್‌ ಕ್ಲಾಸ್‌ ಲೋಕಾರ್ಪಣೆ

Suddi Udaya

ಕೊಕ್ಕಡದಲ್ಲಿ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ

Suddi Udaya

ಲಾಯಿಲ : ಸಿಂಧೂರ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮ

Suddi Udaya
error: Content is protected !!