ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ)ಬೆಳ್ತಂಗಡಿ ತಾಲೂಕು. ವತಿಯಿಂದ,ಅರಣ್ಯ ಇಲಾಖೆಯ ಸಹಕಾರದೊಂದಿಗೆ ನೆಲ, ಜಲ ಪ್ರಾಣಿ ಸಂಕುಲ ಮತ್ತು ವನ ಸಂರಕ್ಷಣೆಯ ಪ್ರಯುಕ್ತ, ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ ಅಮ್ಮನವರ ಮಾರ್ಗದರ್ಶನದೊಂದಿಗೆ ಸಾಮಾಜಿಕ ಅರಣೀಕರಣ ಕಾರ್ಯಕ್ರಮದಡಿ ತಾಲೂಕಿನ 5000 ಗಿಡಗಳ ವಿತರಣಾ ಕಾರ್ಯಕ್ರಮ ಆ.1ರಂದು ಉಜಿರೆ ಶಾರದಾ ಮಂಟಪದಲ್ಲಿ ಜರುಗಿತು.
ಉದ್ಘಾಟನೆಯನ್ನು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರಾದ ಶರತ್‌ಕೃಷ್ಣ ಪಡುವೆಟ್ನಾಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಾವು ಪ್ರಕೃತಿ ಆರಾಧಕರು, ಆದರೆ ಇಂದು ಆರಾಧನೆಗೆ ಪ್ರಕೃತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ವೈನಾಡಿನಲ್ಲಿ ಘೋರ ದುರಂತವನ್ನು ಕಂಡಿದ್ದೇವೆ. ಪ್ರಕೃತಿ ಅನಾಹುತ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ. ಅದಕ್ಕಾಗಿ ನಾವು ಪ್ರಕೃತಿ ಮತ್ತು ಮಣ್ಣಿನ ಸಂರಕ್ಷಣೆ ಬಗ್ಗೆ ಯೋಚಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರಕೃತಿ ಉಳಿಸುವ ದೊಡ್ಡ ಕಾಯ೯ಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರಾದೇಶಿಕ ಕೃಷಿ ನಿರ್ದೇಶಕರು, ಕೇಂದ್ರ ಕಛೇರಿ, ಧರ್ಮಸ್ಥಳ ಮನೋಜ್ ವಿನೇಜಸ್ ಸಸಿಗಳನ್ನು ವಿತರಿಸಿದರು.
ಲೋಕೇಶ್ ಉಪವಲಯ ಅರಣ್ಯಾಧಿಕಾರಿ, ಅರಣ್ಯ ಇಲಾಖೆ ಉಜಿರೆ ಗಿಡ ನಾಟಿಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯೋಜನಾಧಿಕಾರಿಗಳು, ಎಸ್.ಕೆ.ಡಿ.ಆರ್.ಡಿ.ಪಿ. ಸುರೇಂದ್ರ, ಶೌರ್ಯ’ ವಿಪತ್ತು ನಿರ್ವಹಣಾ ಘಟಕ, ಬೆಳ್ತಂಗಡಿಯ ಕ್ಯಾಪ್ಟನ್ ಸಂತೋಷ್ ಭಾಗವಹಿಸಿದ್ದರು. ಕೃಷಿ ನಿರ್ದೇಶಕ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.