April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಕರ್ತವ್ಯ ಲೋಪ ಆರೋಪ: ಮರೋಡಿ ಗ್ರಾಮ‌ ಲೆಕ್ಕಾಧಿಕಾರಿ ಶಿವಕುಮಾರ್ ಸಸ್ಪೆಂಡ್ ಗೆ ಸೂಚನೆ

ಬೆಳ್ತಂಗಡಿ: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮಸ್ಥರಿಗೆ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸದೆ, ಕರ್ತವ್ಯ ಲೋಪ ಮಾಡಿರುವ ಮರೋಡಿ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಅವರನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆ.1 ರಂದು ಅಮಾನತುಗೊಳಿಸುವುದಾಗಿ ತಿಳಿಸಿದ್ದಾರೆ.

ಮರೋಡಿ ಗ್ರಾ.ಪಂ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದ ಸಂದರ್ಭದಲ್ಲಿ ಮರೋಡಿ ಗ್ರಾ.ಪಂ ಅಧ್ಯಕ್ಷ ರತ್ನಾಕರ ಬುಣ್ಣನ್ ಗ್ರಾಮ ಲೆಕ್ಕಾಧಿಕಾರಿಯ ಕರ್ತವ್ಯ ಲೋಪದ ಬಗ್ಗೆ ವಿವರಿಸಿದ್ದು ತಕ್ಷಣ ಜಿಲ್ಲಾಧಿಕಾರಿ ಅಮಾನುತುಗೊಳಿಸಲು ತಹಶೀಲ್ದಾರರಿಗೆ ಸೂಚಿಸಿದರು.

ಮರೋಡಿ ಗ್ರಾಮ‌ ಲೆಕ್ಕಾಧಿಕಾರಿ ಕಂದಾಯ ಇಲಾಖೆಗೆ ಸಂಭಂಧಿಸಿದ ಕೆಲಸವನ್ನು ಸರಿಯಾಗಿ ಮಾಡಿಕೊಡುತ್ತಿರಲಿಲ್ಲ. ಯಾವುದೇ ಮಾಹಿತಿಯನ್ನು ತಿಳಿಸುತ್ತಿರಲಿಲ್ಲ. ಮಳೆ ಹಾನಿಯಾದ ಪ್ರದೇಶಕ್ಕೂ ಮಳೆ ಹಾನಿಯಿಂದ ಸಮಸ್ಯೆ ಆದರೂ ಭೇಟಿ ನೀಡಲಿಲ್ಲ ಎಂದು ಅಧ್ಯಕ್ಷರು ಸಹಿತ ಗ್ರಾಮಸ್ಥರು ಆರೋಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಕರಣಿಕ ಶಿವಕುಮಾರ್ ಅವರನ್ನು ವಿಚಾರಿಸಿದಾಗ ಗ್ರಾಮಕರಣಿಕ ಸಮಪ೯ಕ ಉತ್ತರ ನೀಡದಿರುವುದರಿಂದ ಅವರನ್ನು ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಧ್ಯಮ ಗಳಿಗೆ ತಿಳಿಸಿದರು.

Related posts

ಎಸ್‌ಎಸ್‌ಎಲ್‌ಸಿ ಫಲಿತಾಂಶ: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

Suddi Udaya

ಪಡಂಗಡಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಸುಂದರ ಪೂಜಾರಿ ಅವಿರೋಧ ಆಯ್ಕೆ

Suddi Udaya

ಇಳಂತಿಲ ಶಾಲೆಗೆ ನುಗ್ಗಿದ ಕಳ್ಳರು: ಕಪಾಟಿನಲ್ಲಿ ಇಟ್ಟಿದ್ದ ನಗದು ಕಳವು

Suddi Udaya

ರಕ್ರೇಶ್ವರಿ ಪದವು ಅಂಗನವಾಡಿ
ಕಾರ್ಯಕರ್ತೆ ನಾಗವೇಣಿ ಅವರಿಗೆ
ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಜಿಲ್ಲಾ ಪ್ರಶಸ್ತಿಗೆ ಆಯ್ಕೆ

Suddi Udaya

ಬೆಳಾಲು ಪ್ರೌಢಶಾಲಾ ಮಕ್ಕಳಿಂದ ಬಳಂಜ ಫಾರ್ಮ್ ಭೇಟಿ

Suddi Udaya

ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರುವಾಯನಕೆರೆಯಲ್ಲಿ ನೂತನ ಶಾಖೆ ಉದ್ಘಾಟನೆ

Suddi Udaya
error: Content is protected !!