ಅಳದಂಗಡಿ: ಕಳೆದ ಕೆಲ ದಿನಗಳಿಂದ ಧಾರಕಾರವಾಗಿ ಸುರಿದ ಮಳೆ ನೀರು ಸರಾಗವಾಗಿ ಹರಿಯದೆ ಕೊಡಂಗೆ ದೈಲಬೈಲು ತೋಡು ಕುಸಿದು ಹಲವರ ಕೃಷಿ ಭೂಮಿ ಮುಳುಗಡೆಯಾಗಿದೆ.
ಕಳೆದ ಹಲವು ವರ್ಷಗಳಿಂದ ಕೊಡಂಗೆ ದೈಲಬೈಲು ತೋಡು ಕುಸಿದು ಮಳೆ ನೀರು ಈ ಭಾಗದ ಸಂಜೀವ ಪೂಜಾರಿ ಕೊಡಂಗೆ, ಅಲೋಶಿಯಸ್ ಡಿಸೋಜ, ಎಲ್ವಿಸ್ ವಾಸ್ ಹಾಗೂ ಸುಮಾರು 10 ರೈತರ ತೋಟಗಳಿಗೆ ನೀರು ತುಂಬಿ ಕೃಷಿ ಭೂಮಿ ಮುಳುಗಡೆಯಾಗಿ ನಷ್ಟವಾಗಿದೆ.
ಕೃಷಿಕರ ಸಂಕಷ್ಟ ಕೇಳುವವರೇ ಇಲ್ಲ
ಕಳೆದ 3 ವರ್ಷದಿಂದ ನಮಗೆ ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತಿದೆ. ಈ ಭಾಗದ ತೋಟದಲ್ಲಿ ಪ್ರತಿ ವರ್ಷ ಅಡಿಕೆ ಮರಗಳು ಕೊಳೆ ರೋಗಕ್ಕೆ ತುತ್ತಾಗುತ್ತಿವೆ. ಇಲ್ಲಿ ಸಮರ್ಪಕವಾದ ತೋಡಿನ ಕಾಮಗಾರಿ ಆಗದ ಹೊರತು ಈ ಸಮಸ್ಯೆಗೆ ಪರಿಹಾರ ಸಿಗದು. ಸಂಬಂಧಪಟ್ಟವರು ಶೀಘ್ರವೇ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸಿ ಈ ಭಾಗದ ಕೃಷಿಕರನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ ಎಂದು ಸಂಜೀವ ಪೂಜಾರಿ ಕೊಡಂಗೆ ತಿಳಿಸಿದರು.