22.9 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಆಕಸ್ಮಿಕವಾಗಿ ಬಾವಿಗೆ ಜಾರಿ ಬಿದ್ದು ವೃದ್ಧೆ ಸಾವು

ಬೆಳ್ತಂಗಡಿ : ಮನೆಯ ಬಾವಿಗೆ ಜಾರಿ ಬಿದ್ದು ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ನಗರದಲ್ಲಿ ಆ.2 ರಂದು ನಡೆದಿದೆ.

ಬೆಳ್ತಂಗಡಿ ಗುರುದೇವ ಕಾಲೇಜು ರಸ್ತೆಯಲ್ಲಿರುವ ಸೀಡ್ ಫಾರ್ಮ್ ಬಳಿ ಇರುವ ಮನೆಯ ಬಾವಿಗೆ ಸಂಜೆ ಆಕಸ್ಮಿಕವಾಗಿ ಜಾರಿ ಬಿದ್ದು ಸುಮಾಲಿನಿ ಜೈನ್ (63) ಎಂಬವರು ಸಾವನ್ನಪ್ಪಿದ್ದಾರೆ.

ಕೆಲಸದ ನಿಮ್ಮಿತ ಗಂಡ ಹೊರಗಡೆ ಹೋಗಿದ್ದು ಮನೆಗೆ ಬಂದಾಗ ಬಾವಿಯಲ್ಲಿ ಶಬ್ದ ಕೇಳಿಸಿದೆ ನೋಡಿದಾಗ ಪತ್ಮಿ ನೀರಿನಲ್ಲಿ ರಕ್ಷಣೆಗೆ ಬಡಿದಾಟ ಮಾಡುತ್ತಿರುವುದು ಕಂಡಿದೆ ತಕ್ಷಣ ಆಂಬುಲೆನ್ಸ್ ಬಾಬಾ ಜಲೀಲ್ ಅವರಿಗೆ ಕರೆ ಮಾಡಿ ಕರೆಸಿ ಬಾವಿಗೆ ಹಗ್ಗ ಹಾಕಿ ವೃದ್ಧೆಯನ್ನು ಮೇಲಕ್ಕೆತ್ತಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಿದಾಗ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವೃದ್ಧೆಗೆ ಅನಾರೋಗ್ಯ ಇದ್ದು ಇದರಿಂದ ಬಾವಿಗೆ ಜಾರಿ ಬಿದ್ದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಗರ್ಡಾಡಿ ಯುವಕ ಮಂಡಲದ ಅಧ್ಯಕ್ಷರಾಗಿ ದಿನೇಶ್ ಬಂಗೇರ ಆಯ್ಕೆ

Suddi Udaya

ಬೆಳಾಲು: ಧ.ಮಂ. ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಬಿಎಂಎಸ್ ರಿಕ್ಷಾ ಚಾಲಕ ಸಂಘದಿಂದ ಕ್ಷೇಮನಿಧಿ ಸಹಾಯ ಹಸ್ತಾಂತರ

Suddi Udaya

ತಣ್ಣೀರುಪಂತ: ಪಾಲೇದು ಮಹಮ್ಮಾಯಿ ದೇವಿಯ ಅಂಗಾರ ಪೂಜೆ

Suddi Udaya

ಮಚ್ಚಿನ ಗ್ರಾಮದ ಕುತ್ತಿನ ನಿವಾಸಿ ಧರ್ಣಪ್ಪ ಮೂಲ್ಯ ನಿಧನ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಗೆ ಶೇ. 91.83% ಫಲಿತಾಂಶ

Suddi Udaya
error: Content is protected !!