28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕೊಯ್ಯೂರು: ಆದೂರ್ ಪೆರಾಲ್ ಉತ್ಸಾಹಿ ಸ್ವಯಂ ಸೇವಕ ತಂಡದಿಂದ ಶ್ರಮದಾನ

ಕೊಯ್ಯೂರು : ಉತ್ಸಾಹಿ ಸ್ವಯಂ ಸೇವಕ ತಂಡ ಆದೂರ್ ಪೆರಾಲ್ ಕೊಯ್ಯೂರು ಇದರ ಸದಸ್ಯರಿಂದ ಶ್ರಮದಾನದ ಮೂಲಕ ಭೂಕುಸಿತ ಸಂಭವಿಸಿ ತೋಡಿಗೆ ಬಿದ್ದಿರುವ ಮಣ್ಣು ಮತ್ತು ಇನ್ನಿತರ ವಸ್ತುಗಳ ತೆರವುಗೊಳಿಸುವ ಕಾರ್ಯಕ್ರಮ ನಡೆಯಿತು.


ಕೊಯ್ಯೂರು ನಾಗನೋಡಿ ಹೇಮಂತ ಗೌಡರ ಮನೆಯ ಹಿಂಭಾಗದಲ್ಲಿ ವಿಪರೀತ ಮಳೆಯಿಂದ ಭೂಕುಸಿತ ಉಂಟಾಗಿ ಮಣ್ಣು ಹಾಗೂ ಮರಗಳು ನೀರು ಹರಿಯುವ ತೋಡಿಗೆ ಬಿದ್ದು ತುಂಬಾ ಸಮಸ್ಯೆಯಗಿತ್ತು. ಈ ಸಮಸ್ಯೆಯನ್ನು ಶ್ರೀ ಕೃಷ್ಣ ಭಜನಾ ಮಂಡಳಿ ಆದೂರ್ ಪೆರಾಲ್, ಕೊಯ್ಯೂರು ಇದರ ಸಹಕಾರದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಉತ್ಸಾಹಿ ಸ್ವಯಂ ಸೇವಕರ ತಂಡದ ಸದಸ್ಯರು ಒಟ್ಟಾಗಿ ಸೇರಿ ಇಂದು ಸತತ 7 ಗಂಟೆಗಳ ಕಾಲ ಶ್ರಮದಾನದ ಮೂಲಕ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸಿ ನೀರು ಸುಗಮವಾಗಿ ಹರಿಯುವಂತೆ ಮಾಡಿ ಮುಂದಕ್ಕೆ ಆಗಬಹುದಾದ ಹೆಚ್ಚಿನ ಅಪಾಯವನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟುವಲ್ಲಿ ಯಶಸ್ವಿಯಾದರು.

Related posts

ಬ್ರಹ್ಮ ಶ್ರೀ ನಾರಾಯಣ ಗುರುಗಳ 169ನೇ ಜಯಂತಿಯ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಯವರಿಗೆ ಸನ್ಮಾನ

Suddi Udaya

ವೇಣೂರಿನ ನವಚೇತನ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಪಂದ್ಯಾಟ: ಶರ್ವಿನ್ ಮೋನಿಸ್, ಸಾನ್ವಿ ಎಂ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನ ಐಟಿ ಕ್ಲಬ್ ನ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಗೆ ಜಯ

Suddi Udaya

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಕಳಿಯ ಗ್ರಾ.ಪಂ.ನಲ್ಲಿ ಮೆಸ್ಕಾಂನಿಂದ ಗೃಹಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ ಕಾರ್ಯಕ್ರಮ

Suddi Udaya

ಡಿ.4: ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya
error: Content is protected !!