ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿದೆ ತಕ್ಷಣ ಬೆಳ್ತಂಗಡಿ ತಾಲೂಕಿಗೆ ವಿಶೇಷ ಪ್ಯಾಕೇಜ್ ನ್ನು ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು. ಅವರು ಆ.2 ರಂದು ಪ್ರವಾಸಿ ಮಂದಿರದಲ್ಲಿ ನಡೆದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬೆಳ್ತಂಗಡಿಯಲ್ಲಿ ನಾಲ್ಕು ದಶಕಗಳಲ್ಲಿ ಕಾಣದ ಮಳೆ ಈ ಬಾರಿಯಾಗಿದೆ ಜನರು ಬಹಳ ದೊಡ್ಡ ಕಷ್ಟ ನಷ್ಟಗಳನ್ನು ಅನುಭವಿಸಿದ್ದಾರೆ. ಬೆಳ್ತಂಗಡಿ ಬಿಜೆಪಿ ಮಂಡಲ ಒಂದು ವಾರದಿಂದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡುತ್ತಾ ಬಂದಿದ್ದು, ಬಿಜೆಪಿ ಪಕ್ಷ ವತಿಯಿಂದ ಆರ್ಥಿಕ ಸಹಾಯ ಕೂಡ ಮಾಡುತ್ತಾ ಇದ್ದೇವೆ. ಆಡಳಿತ ಯಂತ್ರ ನಿರ್ಲಕ್ಷ್ಯದಿಂದ ರೆಖ್ಯ ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುಡ್ಡ ಕುಸಿದು ಸಾಕಷ್ಟು ನಷ್ಟವಾಗಿದೆ ಯಾರು ಕೂಡ ಭೇಟಿ ನೀಡಲಿಲ್ಲ ನಾನು ಇವತ್ತು ಭೇಟಿ ನೀಡಿದ್ದೇನೆ.
ಸರ್ಕಾರದಲ್ಲಿ ಆರ್ಥಿಕ ವ್ಯವಸ್ಥೆ ಇಲ್ಲ, ಮಳೆಹಾನಿಗೆ ಗ್ರಾಮ ಪಂಚಾಯತ್ ಗೆ 15 ಸಾವಿರ ರೂಪಾಯಿ ಬಂದಿದೆ. ಆ 15 ಸಾವಿರದಲ್ಲಿ ಏನು ವ್ಯವಸ್ಥೆ ಮಾಡಬಹುದು? ತುರ್ತು ಕೆಲಸ ಮಾಡಲು ಆರ್ಥಿಕವಾಗಿ ಬಲ ಕೊಡಲಿಲ್ಲ, ವಿಶೇಷ ಆರ್ಥಿಕವಾಗಿ ಪಂಚಾಯತ್ ಗೆ ಹಣ ಬಿಡುಗಡೆ ಮಾಡಬೇಕು.
ಉಸ್ತುವಾರಿ ಸಚಿವರು ಬಹಳ ದಿನಗಳ ನಂತರ ಬೆಳ್ತಂಗಡಿ ತಾಲೂಕಿಗೆ ಬಂದಿದ್ದಾರೆ ಬರುವಾಗ ತಾಲೂಕಿನ ಶಾಸಕರಿಗೆ ಮಾಹಿತಿ ನೀಡಬೇಕಿತ್ತು, ಆದರೆ ಮಾಹಿತಿ ನೀಡಲಿಲ್ಲ.
ದಕ್ಷಿಣಕನ್ನಡ ಜಿಲ್ಲೆಗೆ 300 ಕೋಟಿ ವಿಶೇಷ ಪ್ಯಾಕೇಜ್ ಯನ್ನು ಬಿಡುಗಡೆ ಮಾಡಬೇಕು. ಮಳೆಹಾನಿಯಿಂದ ಮನೆಗೆ, ದನದ ಕೊಟ್ಟಿಗೆ, ಮೋರಿ, ರಸ್ತೆ ಹಾನಿ ಉಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ಹಾನಿಯಾದರೆ 5 ಲಕ್ಷ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇವತ್ತಿನವರೆಗೆ ಸರ್ಕಾರದಿಂದ ಜಿಲ್ಲಾಧಿಕಾರಿಗೆ ಸುತ್ತೋಲೆ ಬರಲಿಲ್ಲ. 2019-20 ಸಾಲಿನಲ್ಲಿ ಬೆಳ್ತಂಗಡಿಯಲ್ಲಿ ಮಳೆಯಿಂದ 249 ಮನೆ ಸಂಪೂರ್ಣ ಹಾನಿಯಾಗಿತ್ತು 40 ಭಾಗಶಃ ಹಾನಿಯಾಗಿತ್ತು ಆ ಸಮಯದಲ್ಲಿ ತಾಲೂಕಿಗೆ 11 ಕೋಟಿ 53 ಲಕ್ಷ 50 ಸಾವಿರ ಬಿಡುಗಡೆಯಾಗಿದೆ.
ನೆರೆ ಸಂದರ್ಭದಲ್ಲಿ ರಾಜಕೀಯ ಮಾಡುತ್ತಾ ಸಣ್ಣತನ ತೋರಿಸುವಂತಹದ್ದು ಬೆಳ್ತಂಗಡಿ ಕಾಂಗ್ರೆಸ್ ನವರಿಗೆ ಶೋಭೆ ತರುವುದಿಲ್ಲ ಕಾಂಗ್ರೆಸ್ ನವರು ಭೇಟಿ ನೀಡಿ ಎಷ್ಟು ಮನೆಗಳಿಗೆ ಅನುದಾನ ಕೊಟ್ಟಿದ್ದೀರಿ?. ಎಂಟು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಮ್ಮ ಬಿಜೆಪಿ ಮಂಡಲ ಶಕ್ತಿ ಮೀರಿ ನಮ್ಮಿಂದ ಆದ ಆರ್ಥಿಕ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ.
ತಹಶೀಲ್ದಾರ್ ತಾಲೂಕಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ರೆಖ್ಯ ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತಕ್ಷಣ ಭೇಟಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ ಹಾಗೂ ಪ್ರಶಾಂತ್ ಪಾರೆಂಕಿ ಸುದ್ದಿಗೋಷ್ಠಿಯಲ್ಲಿದ್ದರು.