ಬೆಳ್ತಂಗಡಿ ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ನಿಂದ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ

Suddi Udaya

ಬೆಳ್ತಂಗಡಿ ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾಣೆಯಾಗಿದ್ದಾರೆ ಅವರನ್ನು ಹುಡುಕಿ ಕೊಡಿ ಎಂದು ಫಲಕಗಳನ್ನು ಹಿಡಿದು
ಪ್ರತಿಭಟನೆ ನಡೆಸಿದರು.
ಇಂಟೆಕ್ ಅಧ್ಯಕ್ಷ ನವೀನ್ ಗೌಡ ಸವಣಾಲು ಮಾತನಾಡಿ,ಇಡೀ ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಿಂದಾಗಿ ಜನರು ಸಂಕಷ್ಟದಲ್ಲಿದ್ದರೂ ಶಾಸಕರು ಮಾತ್ರ ಬೆಂಗಳೂರಿನಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಈ ಹಿಂದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಟಾರ್ಚ್ ಹಾಕಿ ಹುಡುಕಬೇಕು ಎಂದ ಶಾಸಕರನ್ನು ಈಗ ನೆರೆ ಸಂತ್ರಸ್ತರು ಟಾರ್ಚ್ ಹಾಕಿ ಹುಡುಕಬೇಕಾಗಿದೆ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ಶೆಟ್ಟಿ ಆರಂಬೋಡಿ ಮಾತನಾಡಿ ಕಳೆದ ಚುನಾವಣೆಯಲ್ಲಿ 1 ಲಕ್ಷ ಮತ ನೀಡಿದ ತಾಲೂಕಿನ ಜನರು ಸಂಕಷ್ಟದಲ್ಲಿರುವಾಗ ಶಾಸಕ ಹರೀಶ್ ಪೂಂಜಾ ಬೆಂಗಳೂರಿನಲ್ಲಿ ರೌಡಿಯೊಬ್ಬನ ಹಿತ ಕಾಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ , ಕಳಿಯ ಗ್ರಾಮ ಪಂಚಾಯತ್ ಸದಸ್ಯ ಕರೀಂ ಗೇರುಕಟ್ಟೆ , ಕಾಂಗ್ರೆಸ್ ಪಕ್ಷದ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ ಅಳದಂಗಡಿ , ಹನೀಪ್ ಉಜಿರೆ ಮಾತನಾಡಿದರು.

ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷೆ ವಂದನಾ ಭಂಡಾರಿ , ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸವಿತಾ ಕೊರಗ , ಎಸ್ಟಿ ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ , ಮಾಜಿ ತಾಲೂಕು ಪಂಚಾಯತ್ ಸದಸ್ಯ ಗೋಪಿನಾಥ್ ನಾಯಕ್ , ಮುಖಂಡರಾದ ರವೀಂದ್ರ ಬಿ ಅಮಿನ್ , ಸದಾನಂದ ನಾಲ್ಕೂರು , ಪ್ರಜ್ವಲ್ ಜೈನ್ ಅಳದಂಗಡಿ , ಅಶ್ವಿನ್ ಕುಮಾರ್ ಬಳೆಂಜ ಉಪಸ್ಥಿತರಿದ್ದರು.

Leave a Comment

error: Content is protected !!