23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ರಾಜ್ಯ ಹೈಕೋರ್ಟ್ ನಿಂದ ತಡೆ: ಯಥಾಸ್ಥಿತಿ ಕಾಪಾಡುವಂತೆ ಆದೇಶ

ಬೆಳ್ತಂಗಡಿ: ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯ ನಿಯಮಾವಳಿ (ಬೈಲಾ) ಅಂಗೀಕರಿಸಿಲ್ಲ, ಲೆಕ್ಕ ಪರಿಶೋಧಕರಿಗೆ ಲೆಕ್ಕ ಪತ್ರ ಪ್ರಸ್ತುತಪಡಿಸಿಲ್ಲ ಹಾಗೂ ಆಡಳಿತ ಮಂಡಳಿಯನ್ನು ರಚಿಸಿ ಅದಕ್ಕೆ ರಾಜ್ಯ ವಕ್ಸ್ ಮಂಡಳಿಯಿಂದ ಅಂಗೀಕಾರ ಪಡೆಯದೆ ಸ್ವಯಂ ಘೋಷಿತ ಸಮಿತಿ ರಚಿಸಿಕೊಂಡಿದ್ದಾಗಿ ದೂರಿನ ಮೇಲೆ ಚಾರ್ಮಾಡಿ ಜಲಾಲಿಯಾ ನಗರ ಮುಹ್ಯುದ್ದೀನ್ ಜುಮ್ಮಾ ಮಸ್ಟಿದ್‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ರಾಜ್ಯ ವಕ್ಸ್ ಮಂಡಳಿ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಅಲ್ಲದೆ ಈ ಹಿಂದಿನಂತೆ ಯಥಾಸ್ಥಿತಿ ಕಾಪಾಡುವಂತೆ ತೀರ್ಪಿತ್ತಿದೆ. ಹೈಕೋರ್ಟ್ ನ್ಯಾಯಾಧೀಶ ಹೇಮಂತ್ ಚಂದನಗೌಡರ್ ಅವರು ಈ ತಡೆ ತೀರ್ಪು ಪ್ರಕಟಿಸಿದ್ದರು.


ಜಮಾಅತ್ ಪರವಾಗಿ ಹೈಕೋರ್ಟ್ ನ್ಯಾಯವಾದಿ ಲತೀಫ್ ವಾದಿಸಿದ್ದರು.

ಅಂದು‌ ವಕ್ಫ್ ಆದೇಶದ ಹಿನ್ನೆಲೆಯಲ್ಲಿ ಜೂನ್ 1ರಂದು ಮಸ್ಟಿದ್ ಗೆ ಭೇಟಿ ನೀಡಿದ್ದ ವಕ್ಸ್ ಜಿಲ್ಲಾ ಅಧಿಕಾರಿ ಅಬೂಬಕ್ಕರ್ ಅವರ ನೇತೃತ್ವದ ನಿಯೋಗ ಮಸ್ಜಿದ್‌ನ ಸೂಚನಾ ಫಲಕದಲ್ಲಿ ಆದೇಶ ಜಾರಿಗೊಳಿಸಿದ್ದರು. ವಕ್ಫ್ ಮಂಡಳಿಯಿಂದ ನೂತನ ಆಡಳಿತಾಧಿಕಾರಿ ನೇಮಕಗಳಿಸಿದ ಬಗ್ಗೆಯೂ ಅಧಿಕೃತ ಮಾಹಿತಿ ನೀಡಿದ್ದರು.

ಆಡಳಿತಾಧಿಕಾರಿ ನೇಮಿಸಿದ್ದರೂ ಯಾವುದೇ ನಿರ್ವಹಣೆ ನಡೆದಿರಲಿಲ್ಲ;

ವಕ್ಫ್ ಆದೇಶದಂತೆ ಆಡಳಿತಾಧಿಕಾರಿ ನೇಮಿಸಿದ್ದರೂ ಅಂದು ನೋಟೀಸು ಜಾರಿಗೊಳಿಸಿದ ಬಳಿಕ ಇದುವರೆಗೆ ಅಧಿಕಾರಿ ಮಟ್ಟದಲ್ಲಿ ಯಾವುದೇ ಕಾರ್ಯಚಟುವಟಿಕೆ ಮಸ್ಜಿದ್ ನಲ್ಲಿ ನಡೆದಿರಲಿಲ್ಲ. ಉಸ್ತಾದರುಗಳಿಗೆ ಸಂಬಳ ಪಾವತಿ, ಆಡಳಿತ ನಿರ್ವಹಣೆ, ಶುಕ್ರವಾರದ ಊಟದ ವ್ಯವಸ್ಥೆ, ವಂತಿಗೆ ವಸೂಲಿ, ಉತ್ಯಾಧಿ ಯಾವುದೇ ವಿಚಾರದಲ್ಲೂ ಇಲಾಖೆ ತಲೆಹಾಕಿರಲಿಲ್ಲ.

ಇದರಿಂದಾಗಿ ಎರಡು ತಿಂಗಳಿನಿಂದ ಮಸ್ಜಿದ್ ನ ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡಿದ್ದವು.‌ ಇದೀಗ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಆ. 3 ರ ಶುಕ್ರವಾರದಂತು ಈ ಹಿಂದೆ ಚಾಲ್ತಿಯಲ್ಲಿರುವ ಆಡಳಿತ ಸಮಿತಿ ತನ್ನ ಜವಾಬ್ದಾರಿ ನಿರ್ವಹಿಸಿದೆ. ನಿಂತು‌ ಹೋಗಿದ್ದ ಅನ್ನದಾನ ಕಾರ್ಯವೂ ಜಾರಿಗೆ ಬಂದಿದೆ.

Related posts

ಮುಂಡಾಜೆ ಗ್ರಾ.ಪಂ. ನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಮಡಂತ್ಯಾರು: ಎಲೆಕ್ಟ್ರಿಕಲ್ ಉದಯ ಹೃದಯಾಘಾತದಿಂದ ನಿಧನ

Suddi Udaya

ಶಿಶಿಲ: ನಾಗನಡ್ಕ ನಿವಾಸಿ ವ್ಯಾಸ ನಿಧನ

Suddi Udaya

ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ: ನವನೀತ್ ಕೊಯ್ಯೂರು ಅವರ ತಂಡ ದ್ವಿತೀಯ ಸ್ಥಾನ

Suddi Udaya

ಮೈರೋಳ್ತಡ್ಕ ಸ.ಉ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಕುತ್ಯಾರು ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ: ಬೆಳ್ತಂಗಡಿ ಪೊಲೀಸ್ ರಿಂದ ತನಿಖೆ

Suddi Udaya
error: Content is protected !!