September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗರ್ಡಾಡಿ: ಸತ್ಯ ಶೋಧಕ ವೇದಿಕೆಯಿಂದ ಹಚ್ಚಾಡಿ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

ಗರ್ಡಾಡಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸತ್ಯ ಶೋಧಕ ವೇದಿಕೆಯಿಂದ ಜೂ. 8 ರಂದು ಗರ್ಡಾಡಿ ಗ್ರಾಮದ ಹಚ್ಚಾಡಿ ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳೊಂದಿಗೆ, ಅಂಗನವಾಡಿ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಸತ್ಯ ಶೋಧಕ ವೇದಿಕೆಯ ಅಧ್ಯಕ್ಷ ಸುಕೇಶ್ ಮಾಲಾಡಿ ಮಾತಾಡಿ, ನಮ್ಮ ಮುಂದಿನ‌ ಬದುಕಿಗಾಗಿ ನಾವು ಪರಿಸರವನ್ನು ಸಂರಕ್ಷಣೆ ಮಾಡಲೇಬೇಕಾಗಿದೆ. ಹಸಿರೇ ಉಸಿರು, ಉಸಿರಿಗಾಗಿ ಪರಿಸರ ಎನ್ನುವಂತೆ ಸತ್ಯ ಶೋಧಕದ ಆಶಯಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಕೂಡ ಒಂದು. ಪರಿಸರದ ಕಾಳಜಿ ಸಣ್ಣ ಮಕ್ಕಳಿಂದಲೇ ಆರಂಭವಾಗಬೇಕು ಎಂದು ಸಣ್ಣ ಮಕ್ಕಳನ್ನೇ ಆಯ್ಕೆ ಮಾಡಿದ್ದೇವೆ.‌ ಮುಂದಿನ ದಿನಗಳಲ್ಲಿ ಹಚ್ಚಾಡಿ ಅಂಗನವಾಡಿ ಕೇಂದ್ರಕ್ಕೆ ತಮ್ಮ ತಂಡದಿಂದಾಗುವ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಹಚ್ಚಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಗುಲಾಬಿ‌ ರವರು ಪರಿಸರ ದಿನದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮಕ್ಕೆ ಅಂಗನವಾಡಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಸತ್ಯ ಶೋಧಕ ತಂಡಕ್ಕೆ ಧನ್ಯವಾದ ಸಲ್ಲಿಸಿದರು.‌

ವೇದಿಕೆಯಲ್ಲಿ ಪುಟಾಣಿ ವಂಶಿಕಾ ಇದ್ದರು.‌ ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪರಿಸರದಲ್ಲಿ ಮಕ್ಕಳಿಂದ ಹಾಗೂ ಪೋಷಕರಿಂದ ಗಿಡ ನೆಡಿಸಲಾಯಿತು. ಗಿರೀಶ್ ಪಣಕಜೆ ಸ್ವಾಗತಿಸಿ, ಬಾಬಿ ಮಡಂತ್ಯಾರು ವಂದಿಸಿದರು.

Related posts

ಬೆಳ್ತಂಗಡಿ ಸಂಸ್ಕಾರ ಭಾರತಿ ಮತ್ತು ಹನುಮೋತ್ಸವ ಸಮಿತಿ ಅಳದಂಗಡಿ ವತಿಯಿಂದ ಹನುಮೋತ್ಸವದ ಪೂರ್ವಭಾವಿ ಸಭೆ

Suddi Udaya

ರೆಖ್ಯ: ರಾಷ್ಟ್ರೀಯ ಹೆದ್ದಾರಿ 75ರ ಫ್ಲೈಓವರ್ ನಲ್ಲಿ ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

Suddi Udaya

ಸಿ.ಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

Suddi Udaya

ಎಸ್.ಡಿ.ಎಂ ಅ. ಸೆಕೆಂಡರಿ ಶಾಲಾ ನೂತನ ಮುಖ್ಯೋಪಾಧ್ಯಾಯರಾಗಿ ವಿದ್ಯಾ ಟಿ. ಭಡ್ತಿ

Suddi Udaya

ಸರಕಾರಿ ಅರಣ್ಯ ಭೂಮಿಯನ್ನು ಅತಿ ಕ್ರಮಿಸಿ ಕೃಷಿ ಮಾಡಿದ ಪ್ರಕರಣ : ಹೈಕೋರ್ಟ್ ಸೂಚನೆ ಮೇರೆಗೆ ಅರಣ್ಯ ಇಲಾಖೆಯಿಂದ ತೆರವು

Suddi Udaya

ಕಾವು–ಕೌಕ್ರಾಡಿ ತ್ರಿಗುಣಾತ್ಮಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ: ರೂ.8 ಲಕ್ಷ ವೆಚ್ಚದ ಮಹಾದ್ವಾರ ಉದ್ಘಾಟನೆ

Suddi Udaya
error: Content is protected !!