ಧರ್ಮಸ್ಥಳ: ಮನೆಯೆ ಮೊದಲ ಪಾಠಶಾಲೆ. ಪಾಠ ಎನ್ನುವುದು ಕೇವಲ ಶಾಲೆಯ ಶಿಕ್ಷಣ ಮಾತ್ರವಲ್ಲ. ನಮ್ಮ ಜೀವನದ ಕೊನೆಯವರೆಗೆ ನಮ್ಮ ಜೊತೆಗೆ ನಿಲ್ಲುವ ಮನೆಯ ಪಾಠಗಳು ಕೂಡ ಶಿಕ್ಷಣವಾಗಿದ್ದು ಮಕ್ಕಳ ಪೋಷಣೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾದುದು ಎಂದು ಎಸ್‌ಡಿಎಂ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ಹೇಳಿದರು.
ಅವರು ಶ್ರೀ. ಮಂ.ಸ್ವಾ.ಅ.ಹಿ.ಪ್ರಾ.ಶಾಲೆಯ 2024-25ನೇ ಸಾಲಿನ ಶಿಕ್ಷಕ ರಕ್ಷಕ ಸಭೆಯಲ್ಲಿ ಮಗುವಿನ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಮಗುವಿನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಅಂಶಗಳು, ಮಗುವಿನ ವರ್ತನೆಗಳು, ಮಾನಸಿಕ ಸಮಸ್ಯೆಗಳು, ಮಗುವಿನ ಪೋಷಣಾ ವಿಧಾನ ಇತ್ಯಾದಿ ವಿಚಾರಗಳ ಕುರಿತು ಮನಮುಟ್ಟುವಂತೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಕೆ.ಟಿ. ರಜಪೂತ್ ಶಿಕ್ಷಕ ರಕ್ಷಕರ ಬಾಂಧವ್ಯ ಮಕ್ಕಳ ಕಲಿಯುವಿಕೆಯ ಪ್ರಕ್ರಿಯೆಗೆ ಪೂರಕ ಎಂದರು.
ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ಶ್ರೀಜಾ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕ ಜೋಸೆಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ಉಷಾಕುಮಾರಿ ಸ್ವಾಗತಿಸಿ, ಕಾವ್ಯ ವಂದಿಸಿದರು. ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಕೆ.ಎಂ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.