24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ: ಶ್ರೀ. ಮಂ.ಸ್ವಾ. ಅ. ಹಿ. ಪ್ರಾ. ಶಾಲೆ ಶಿಕ್ಷಕ-ರಕ್ಷಕ ಸಭೆ

ಧರ್ಮಸ್ಥಳ: ಮನೆಯೆ ಮೊದಲ ಪಾಠಶಾಲೆ. ಪಾಠ ಎನ್ನುವುದು ಕೇವಲ ಶಾಲೆಯ ಶಿಕ್ಷಣ ಮಾತ್ರವಲ್ಲ. ನಮ್ಮ ಜೀವನದ ಕೊನೆಯವರೆಗೆ ನಮ್ಮ ಜೊತೆಗೆ ನಿಲ್ಲುವ ಮನೆಯ ಪಾಠಗಳು ಕೂಡ ಶಿಕ್ಷಣವಾಗಿದ್ದು ಮಕ್ಕಳ ಪೋಷಣೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾದುದು ಎಂದು ಎಸ್‌ಡಿಎಂ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ಹೇಳಿದರು.

ಅವರು ಶ್ರೀ. ಮಂ.ಸ್ವಾ.ಅ.ಹಿ.ಪ್ರಾ.ಶಾಲೆಯ 2024-25ನೇ ಸಾಲಿನ ಶಿಕ್ಷಕ ರಕ್ಷಕ ಸಭೆಯಲ್ಲಿ ಮಗುವಿನ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಮಗುವಿನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಅಂಶಗಳು, ಮಗುವಿನ ವರ್ತನೆಗಳು, ಮಾನಸಿಕ ಸಮಸ್ಯೆಗಳು, ಮಗುವಿನ ಪೋಷಣಾ ವಿಧಾನ ಇತ್ಯಾದಿ ವಿಚಾರಗಳ ಕುರಿತು ಮನಮುಟ್ಟುವಂತೆ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಕೆ.ಟಿ. ರಜಪೂತ್ ಶಿಕ್ಷಕ ರಕ್ಷಕರ ಬಾಂಧವ್ಯ ಮಕ್ಕಳ ಕಲಿಯುವಿಕೆಯ ಪ್ರಕ್ರಿಯೆಗೆ ಪೂರಕ ಎಂದರು.

ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ಶ್ರೀಜಾ ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕ ಜೋಸೆಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ಉಷಾಕುಮಾರಿ ಸ್ವಾಗತಿಸಿ, ಕಾವ್ಯ ವಂದಿಸಿದರು. ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಕೆ.ಎಂ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.

Related posts

ನಡ -ಕನ್ಯಾಡಿ ಕಾಂಗ್ರೆಸ್ ಗ್ರಾಮ ಸಮಿತಿ ರಚನೆ: ಅಧ್ಯಕ್ಷರಾಗಿ ಜಾಕೀರ್ ಹುಸೇನ್

Suddi Udaya

ಉಜಿರೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಪೋಸ್ಟರ್ ತಯಾರಿಕಾ ಕಾರ್ಯಾಗಾರ

Suddi Udaya

ಮುಂಡಾಜೆ: ಔಷಧೀಯ ಮೂಲಿಕಾ ವನ ನಿರ್ಮಾಣ 

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ

Suddi Udaya

ಡಿ.13: ಕಕ್ಕಿಂಜೆಯಲ್ಲಿ ಮರ್ಹೂಂ ಅಝ್ಲೀನ್ ಸಿದ್ದೀಕ್ ಸ್ಮರಣಾರ್ಥ ರಕ್ತದಾನ ಶಿಬಿರ

Suddi Udaya

ಉಜಿರೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್‌ ಆಚರಣೆ

Suddi Udaya
error: Content is protected !!