April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆ.11: ಮಡಂತ್ಯಾರಿನಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿ’ ಸೋಜ ರವರಿಗೆ ಅಭಿನಂದನಾ ಸಮಾರಂಭ ಹಾಗೂ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಸಂಯುಕ್ತ ಕ್ರೈಸ್ತ ಸಂಘಟನೆ ಬೆಳ್ತಂಗಡಿ ವತಿಯಿಂದ ಆ. ೧೧ರಂದು ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್ ಮಡಂತ್ಯಾರುನಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾಗಿ ದ್ವಿತೀಯ ಅವಧಿಗೆ ಆಯ್ಕೆಯಾದ ಐವನ್ ಡಿಸೋಜ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಥೋಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷ ಲೀಯೋ ರೊಡ್ರಿಗಸ್, ಹಾಗೂ ರಾಜಕೀಯ ಸಂಚಾಲಕ ವಿನ್ಸೆಂಟ್ ಡಿ ಸೋಜ ತಿಳಿಸಿದ್ದಾರೆ.

ಅವರು ಆ.6 ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಆರಂಭದಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾರವರನ್ನು ಆಕರ್ಷಕ ಬ್ಯಾಂಡ್ ವಾದ್ಯಗಳೊಂದಿಗೆ ಸ್ವಾಗತಿಸಲಾಗುವುದು. ನಂತರ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ| ಲಾರೆನ್ಸ್ ಮುಕ್ಕುಯಿ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಥೋಲಿಕ್ ಸಭಾ ಬೆಳ್ತಂಗಡಿ ವಲಯದ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಬೆಳ್ತಂಗಡಿ ವಲಯದ ಪ್ರಧಾನ ಗುರುಗಳಾದ ರೆ|ಫಾ| ವಾಲ್ಟರ್ ಡಿ ಮೆಲ್ಲೋ ಭಾಗವಹಿಸಲಿದ್ದಾರೆ. ಬೆಳ್ತಂಗಡಿಯ ಖ್ಯಾತ ವಕೀಲರು ಹಾಗೂ ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್ ಕರ್ನಾಟಕ ರಾಜ್ಯದ ಅಧ್ಯಕ್ಷ ಸೇವಿಯರ್ ಪಾಲೇಲಿ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಬೆಳ್ತಂಗಡಿ ವಲಯದ ಕಥೋಲಿಕ್ ಸಭಾ ಅಧ್ಯಕ್ಷ ಲಿಯೋ ರೊಡ್ರಿಗಸ್, ಆಲ್ವಿನ್ ಡಿಸೋಜಾ ಅಧ್ಯಕ್ಷರು ಕಥೋಲಿಕ್ ಸಭಾ ಕೇಂದ್ರಿಯ ಸಮಿತಿ. ಬಿಟ್ಟಿ ನೆಡುನಿಲಂ, ಅಧ್ಯಕ್ಷರು ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿ, ಕೆ.ಪಿ ಜೋಸೆಫ್ ಕಾರ್ಯದರ್ಶಿ ಐಪಿಸಿ ಚರ್ಚ್ ಬೆಳ್ತಂಗಡಿ, ಜೆರಾಲ್ಡ್ ಮೊರಾಸ್ ಕಾರ್ಯದರ್ಶಿ ಚರ್ಚ್ ಪಾಲನ ಸಮಿತಿ ಬೆಳ್ತಂಗಡಿ ವಲಯ, ಉಪಾಧ್ಯಕ್ಷರು ಚರ್ಚ್ ಪಾಲನಾ ಸಮಿತಿ ಮಡಂತ್ಯಾರು, ಶ್ರೀಮತಿ ಐರಿನ್ ಸಿಕ್ವೆರಾ, ಸ್ತ್ರೀ ಹಿತಾ ಸಂಚಾಲಕಿ ಕಥೋಲಿಕ್ ಸಭಾ ಬೆಳ್ತಂಗಡಿ ವಲಯ, ಪಾಸ್ಟಾರ್ ಅಂತೋನಿ ರೊಡ್ರಿಗಸ್ ನ್ಯೂ ಲೈಫ್ ಫೆಲೋಶಿಪ್ ಮಡಂತ್ಯಾರು ಉಪಸ್ಥಿತರಿದ್ದಾರೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಡಂತ್ಯಾರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಮೋರಾಸ್, ಕಥೋಲಿಕ್ ಸಭಾ ಬೆಳ್ತಂಗಡಿ ವಲಯ ಕಾರ್ಯದರ್ಶಿ ಪಿಲಿಪ್ ಡಿ ಕುನ್ಹ, ಐಸಿವೈಎಂ ಬೆಳ್ತಂಗಡಿ ವಲಯ ಅಧ್ಯಕ್ಷ ಸುಪ್ರಿತ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Related posts

ಕಳಿಯ ಗ್ರಾ.ಪಂ. ಗ್ರಾಮ ಸಭೆ : ಲೋಕೋಪಯೋಗಿ ಇಲಾಖೆಯವರು ಬರುವ ತನಕ ನಿಲ್ಲುತೇವೆ: ಕೇಶವ ಪೂಜಾರಿ

Suddi Udaya

ಎರಡನೇ ಬಾರಿಗೆ ಕನಾ೯ಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ : ವಿಜಯೋತ್ಸವ

Suddi Udaya

ಇಳಂತಿಲ ಗ್ರಾಮದ ಪೆದಮಲೆ ಕುಟ್ಟಿಕಳ ಅಜಿಲಮೊಗರು ನಾವೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ರವರಿಗೆ ಮನವಿ

Suddi Udaya

ಜ 7: ಪೆರಾಡಿ ಮಾವಿನಕಟ್ಟೆಯಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ

Suddi Udaya

ಆಮಂತ್ರಣ ಪರಿವಾರದ ರಾಯಭಾರಿ ವಿಜಯ ಕುಮಾರ್ ಜೈನ್ ಅಳದಂಗಡಿ ರವರಿಗೆ ಪುತ್ತೂರು ಪ್ರತಿಭಾ ಸಾಂಸ್ಕೃತಿಕ ಉತ್ಸವದಲ್ಲಿ ಸನ್ಮಾನ

Suddi Udaya

ಮುಂಡಾಜೆ ರಬ್ಬರ್ ಸ್ಮೋಕ್ ಹೌಸ್ ಬೆಂಕಿಗಾಹುತಿ :ರೂ .2ಲಕ್ಷಕ್ಕೂ ಅಧಿಕ ನಷ್ಟ

Suddi Udaya
error: Content is protected !!