September 6, 2026
ತಾಲೂಕು ಸುದ್ದಿ

ವಿಶ್ರಾಂತ ಶಿಕ್ಷಕ ಮುಂಡಾಜೆ ಶಂಕರ್ ತಾಮನ್ಕರ್ ಅವರಿಂದ ಮಾದರಿ ಕಾರ್ಯಕ್ರಮ

ಬೆಳ್ತಂಗಡಿ; ದಿ ನಾರಾಯಣ ತಾಮನ್ಕರ್ ಮುಂಡಾಜೆಯವರ ಸ್ಮರಣಾರ್ಥವಾಗಿ ಅವರ ಮಗ ವಿಶ್ರಾಂತ ಅಧ್ಯಾಪಕ ಹಾಗೂ ಕವಿ ಶಂಕರ್ ಎನ್. ತಾಮನ್ಕರ್ ರವರು ಮತ್ತು ಸ್ವಾತಿ ತಾಮನ್ಕರ್ ಅವರು ತಮ್ಮ “ಪರಂಪರಾ” ಮನೆಯಲ್ಲಿ ಅರ್ಹ ಕುಟುಂಬಗಳಿಗೆ ಆಹಾರದ ಕಿಟ್ ಹಾಗೂ ಪ್ರತಿಭಾ ಸಂಪನ್ನ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾ ನಿಧಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಮುಂಡಾಜೆ ಪರಿಸರದ ನಾಲ್ಕು ವಿದ್ಯಾರ್ಥಿಗಳಿಗೆ ತಲಾ ರೂ. 5000 ದಂತೆ ವಿದ್ಯಾರ್ಥಿ ಸಹಾಯ ಹಸ್ತ, ಮೂರು ಮಂದಿ ಅರ್ಹ ನಾಗರಿಕರಿಗೆ ಆಹಾರ ಕಿಟ್ಟ್ ಹಾಗೂ ಒಬ್ಬ ನಾಗರಿಕರಿಗೆ ರೂ.5000 ಆರೋಗ್ಯ ಸಹಾಯ ಹಸ್ತವನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗಣೇಶ್ ಬಂಗೇರ ಅಧ್ಯಕ್ಷರು ಗ್ರಾಮ ಪಂಚಾಯತ್ ಮುಂಡಾಜೆ, ನಾಮದೇವ ರಾವ್ ಸಂಚಾಲಕರು ಯಂಗ್ ಚಾಲೆಂಜರ್ಸ್ ಮುಂಡಾಜೆ, ಉದ್ಯಮಿ ಅರೆಕ್ಕಲ್ ರಾಮಚಂದ್ರ ಭಟ್, ದಿಶಾ ಪಟವರ್ಧನ್ ಗ್ರಾಮ ಪಂಚಾಯತ್ ಸದಸ್ಯರು ಮುಂಡಾಜೆ ಯವರು ಭಾಗವಹಿಸಿ ಶುಭ ಕೋರಿದರು.ಇಂತಹ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಶಂಕರ್ ತಾಮನ್ಕರರವರು ಸ್ವಾಗತ ಮತ್ತು ವಂದನಾರ್ಪಣೆಯನ್ನು ಮಾಡಿದರು.

Related posts

ಧರ್ಮಸ್ಥಳ: ಮಹಿಳೆ ನೇಣುಬಿಗಿದು ಆತ್ಮಹತ್ಯೆ

Suddi Udaya

ಮಡಂತ್ಯಾರುವಿನಲ್ಲಿ “ಲಸ್ಸಿ ಟೇಲ್ಸ್ ಕೆಫೆ” ಶುಭಾರಂಭ

Suddi Udaya

ರೆಖ್ಯ: ಗಾಳೆ-ಮಳೆಗೆ ಹಾರಿ ಹೋದ ಮನೆಯ ಮೇಲ್ಛಾವಣಿ: ಗ್ರಾಮಸ್ಥರಿಂದ ದುರಸ್ತಿ ಕಾರ್ಯ

Suddi Udaya

ಕಣಿಯೂರು: ಪಿಲಿಗೂಡು ಹಾ.ಉ.ಸ. ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ.61.79 ಲಕ್ಷ ಲಾಭ, ಶೇ. 25 ಡಿವಿಡೆಂಟ್

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ: ರಾತ್ರಿ ಮೂಡಪ್ಪ ಸೇವೆ

Suddi Udaya

ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ವೈಭವ

Suddi Udaya
error: Content is protected !!