ಬೆಳ್ತಂಗಡಿ: ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಶಾಮಿಯಾನ ಮಾಲಕರ ಸಂಘದ ಮಹಾಸಭೆ ಅಳದಂಗಡಿ ಕೆದ್ದುವಿನ ಶ್ರೀ ದೀಪಾ ಸಭಾಭವನದಲ್ಲಿ ನಡೆಯಿತು.
2024-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಗೇರುಕಟ್ಟೆ ಜ್ಯೋತಿ ಶಾಮಿಯಾನದ ಮಾಲಕ ಕಳಿಯ ಗ್ರಾಮ ಪಂಚಾಯತ್ ಸದಸ್ಯ ಬಿ.ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನಾವೂರು ಭಾರತ್ ಶಾಮಿಯಾನದ ಧರ್ಣಪ್ಪ ಮೂಲ್ಯ ನಾವೂರು, ಕೋಶಾಧಿಕಾರಿ ಕಾಯರ್ತಡ್ಕ ಅಭಿಲಾಷ್ ಶಾಮಿಯಾನದ ಜೋಸೆಫ್ ಕೆ.ಡಿ. ಆಯ್ಕೆಯಾದರು.
ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಅರುಣ್ ಮೊರಾಸ್ (ಎಸ್.ಪಿ.ಎಸ್. ಶಾಮಿಯಾನ ಮಡಂತ್ಯಾರು), ರಾಜೇಂದ್ರ ಕುಮಾರ್ (ಎಸ್.ಆರ್. ಶಾಮಿಯಾನ ವೇಣೂರು), ಜೊತೆ ಕಾರ್ಯದರ್ಶಿ ಕೆ.ಎಂ. ಹಕೀಮ್ (ತನಲ್ ಇವೆಂಟ್ ಸರಳಿಕಟ್ಟೆ), ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ್ ಕುಮಾರ್ (ಶ್ರೀ ದೇವಿ ಶಾಮಿಯಾನ ಎಸ್.ಎಮ್), ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ (ಎ.ಕೆ.ಎ. ಶಾಮಿಯಾನ ಕಕ್ಕಿಂಜೆ) ಆಯ್ಕೆಯಾದರು. ತಾಲೂಕಿನ ಎಲ್ಲ ವಲಯಗಳಿಗೆ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಬೆಳ್ತಂಗಡಿ ವಲಯ- ಅವಿಲ್ ಡೇಸಾ ಬಂಗಾಡಿ, ಉಮೇಶ್ ಗೌಡ, ಕಕ್ಕಿಂಜೆ -ತಿರುಮಲೇಶ್, ಧರ್ಮಸ್ಥಳ ಸುಮಿತ್ರಾ, ಗೇರುಕಟ್ಟೆ -ಸುರೇಶ್ ಶ್ರೀ ದೇವಿ ಕೃಪಾ, ಕಲ್ಲೇರಿ – ಬಾಲಕೃಷ್ಣ ಶೆಟ್ಟಿ, ವೇಣೂರು -ಜಿನರಾಜ್ ಜೈನ್, ಅಳದಂಗಡಿ , ಪ್ರಭಾಕರ್ ಕುಲಾಲ್, ಸುಲ್ಕೇರಿ -ವಿಜೇತ್, ಮಡಂತ್ಯಾರು -ಲೆಸ್ಲಿ ಡಿಸೋಜ, ಅರಸಿನಮಕ್ಕಿ – ಅಶ್ವಥ್ ನಿಡ್ಲೆ ಆಯ್ಕೆಯಾದರು.