September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಬೆಳಾಲಿನಲ್ಲಿ, ಹದಿನೆಂಟು ದಿನಗಳ ಭಗವದ್ಗೀತೆ ತರಗತಿಯ ಸಮಾರೋಪ

ಬೆಳಾಲು: ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ವತಿಯಿಂದ ಕಳೆದ ಸಪ್ಟಂಬರ ತಿಂಗಳಲ್ಲಿ ಆರಂಭಗೊಂಡ ಭಗವದ್ಗೀತೆಯ ತರಗತಿಯು, ಹದಿನಂಟು ತರಗತಿಗಳನ್ನು ಪೂರೈಸುವುದರೊಂದಿಗೆ ಮುಕ್ತಾಯಗೊಂಡಿತು.

ಕೊಲ್ಪಾಡಿ ಭಜನಾ ಮಂಡಳಿಯವರು ಪ್ರತೀ ಶನಿವಾರ ವಾರದ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಈ ಸಂದರ್ಭದಲ್ಲಿ ಸೇರುವ ಭಜಕರಿಗೆ ಭಗವದ್ಗೀತೆಯ ವಿಶೇಷ ತರಗತಿಯನ್ನು ಆಯೋಜಿಸಲಾಗಿತ್ತು.

ಭಗವದ್ಗೀತೆಯ ತರಗತಿಯನ್ನು ನಿರಂತರವಾಗಿ ಹಾಗೂ ಸಮರ್ಥ ಗುರುಗಳಾಗಿ ನಡೆಸಿಕೊಟ್ಟವರು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು. ಪ್ರತೀ ತರಗತಿಯಲ್ಲಿ ಒಂದು ಅಧ್ಯಾಯದ ಆಯ್ದ ಶ್ಲೋಕಗಳ ವಾಚನದ ಅಭ್ಯಾಸ ಹಾಗೂ ಸೂಕ್ಷ್ಮವಾಗಿ ಅರ್ಥ ವಿವರಣೆ. ಜೊತೆಗೆ ಪ್ರಧಾನವಾಗಿ ಮಹಾಭಾರತದ ಮತ್ತು ರಾಮಾಯಣದ ಕಥೆಗಳನ್ನು ಹೇಳಿಕೊಡಲಾಗುತ್ತಿತ್ತು. ಗುರುಗಳ ಸಮರ್ಥ ನಿರ್ವಹಣೆ, ಆಕರ್ಷಕ ವಿವರಣೆ, ಚಿಕ್ಕ ಮಕ್ಕಳಿಗೂ ಅರ್ಥ ಆಗುವ ಭಾಷೆ ಮತ್ತು ಪದ ಪ್ರಯೋಗ ತರಗತಿಯನ್ಧು ಅರ್ಥಪೂರ್ಣವಾಗಿಸಿತು.

ಈ ತರಗತಿಯ ಮೂಲಕ ಭಾರತದ ಸಂಸ್ಕೃತಿಯ, ಜೀವನ ಮೌಲ್ಯಗಳ ಪರಿಚಯ ಮತ್ತು ಪ್ರಸಾರದ ಕಾರ್ಯವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯವರು ಶ್ರದ್ಧಾ ಭಕ್ತಿಯಿಂದ ನಡೆಸಿಕೊಟ್ಟಿದ್ದಾರೆ. ಮಂಡಳಿಯ ಅಧ್ಯಕ್ಷರಾದ ಸದಾಶಿವ ಮೈರಾಜೆ ಮತ್ತು ಸದಸ್ಯರೆಲ್ಲರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಪುದುವೆಟ್ಟು ಶಾಲೆಯಲ್ಲಿ ಬಿತ್ತಿ ಪತ್ರಿಕೆ ‘ಸಂಚಯ’ ಬಿಡುಗಡೆ:

Suddi Udaya

ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವದ ಪೂರ್ವಭಾವಿ ಸಭೆ

Suddi Udaya

ಎಸ್.ಡಿ. ಎಂ ಮಹಿಳಾ ಐ.ಟಿ.ಐ ಯಲ್ಲಿ ಆಯುಧ ಪೂಜಾ ಕಾರ್ಯಕ್ರಮ

Suddi Udaya

ಕುಂಟಿನಿ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ

Suddi Udaya

ನಡ, ಮಡಂತ್ಯಾರು ಮತ್ತು ಕಲ್ಲೇರಿಯಲ್ಲಿ ಹರೀಶ್ ಪೂಂಜರ ಬಹಿರಂಗ ಪ್ರಚಾರ ಸಭೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ವತಿಯಿಂದ 20 ನೇ ವರ್ಷದ ಪುಸ್ತಕ ವಿತರಣೆ : ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ – ನಿವೃತ್ತ ಯೋಧರಿಗೆ ಗೌರವಾರ್ಪಣೆ

Suddi Udaya
error: Content is protected !!