September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಾಲೂಕು ಶಾಮಿಯಾನ ಮಾಲಕರ ಸಂಘದ ಮಹಾಸಭೆ: ನೂತನ ಸಮಿತಿ ರಚನೆ

ಬೆಳ್ತಂಗಡಿ: ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಶಾಮಿಯಾನ ಮಾಲಕರ ಸಂಘದ ಮಹಾಸಭೆ ಅಳದಂಗಡಿ ಕೆದ್ದುವಿನ ಶ್ರೀ ದೀಪಾ ಸಭಾಭವನದಲ್ಲಿ ನಡೆಯಿತು.

2024-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಗೇರುಕಟ್ಟೆ ಜ್ಯೋತಿ ಶಾಮಿಯಾನದ ಮಾಲಕ ಕಳಿಯ ಗ್ರಾಮ ಪಂಚಾಯತ್‌ ಸದಸ್ಯ ಬಿ.ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನಾವೂರು ಭಾರತ್ ಶಾಮಿಯಾನದ ಧರ್ಣಪ್ಪ ಮೂಲ್ಯ ನಾವೂರು, ಕೋಶಾಧಿಕಾರಿ ಕಾಯರ್ತಡ್ಕ ಅಭಿಲಾಷ್ ಶಾಮಿಯಾನದ ಜೋಸೆಫ್ ಕೆ.ಡಿ. ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಅರುಣ್ ಮೊರಾಸ್ (ಎಸ್.ಪಿ.ಎಸ್. ಶಾಮಿಯಾನ ಮಡಂತ್ಯಾರು), ರಾಜೇಂದ್ರ ಕುಮಾರ್ (ಎಸ್.ಆರ್. ಶಾಮಿಯಾನ ವೇಣೂರು), ಜೊತೆ ಕಾರ್ಯದರ್ಶಿ ಕೆ.ಎಂ. ಹಕೀಮ್ (ತನಲ್ ಇವೆಂಟ್ ಸರಳಿಕಟ್ಟೆ), ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ್ ಕುಮಾರ್ (ಶ್ರೀ ದೇವಿ ಶಾಮಿಯಾನ ಎಸ್.ಎಮ್), ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ (ಎ.ಕೆ.ಎ. ಶಾಮಿಯಾನ ಕಕ್ಕಿಂಜೆ) ಆಯ್ಕೆಯಾದರು. ತಾಲೂಕಿನ ಎಲ್ಲ ವಲಯಗಳಿಗೆ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಬೆಳ್ತಂಗಡಿ ವಲಯ- ಅವಿಲ್ ಡೇಸಾ ಬಂಗಾಡಿ, ಉಮೇಶ್ ಗೌಡ, ಕಕ್ಕಿಂಜೆ -ತಿರುಮಲೇಶ್, ಧರ್ಮಸ್ಥಳ ಸುಮಿತ್ರಾ, ಗೇರುಕಟ್ಟೆ -ಸುರೇಶ್ ಶ್ರೀ ದೇವಿ ಕೃಪಾ, ಕಲ್ಲೇರಿ – ಬಾಲಕೃಷ್ಣ ಶೆಟ್ಟಿ, ವೇಣೂರು -ಜಿನರಾಜ್ ಜೈನ್, ಅಳದಂಗಡಿ , ಪ್ರಭಾಕರ್ ಕುಲಾಲ್, ಸುಲ್ಕೇರಿ -ವಿಜೇತ್, ಮಡಂತ್ಯಾರು -ಲೆಸ್ಲಿ ಡಿಸೋಜ, ಅರಸಿನಮಕ್ಕಿ – ಅಶ್ವಥ್ ನಿಡ್ಲೆ ಆಯ್ಕೆಯಾದರು.

Related posts

ಬಳಂಜ:ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ದೀಪಾವಳಿ ಸಂಭ್ರಮ

Suddi Udaya

ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಏಳು ಅಸ್ಥಿಪಂಜರ ಎಫ್ಎಸ್ಎಲ್ ಗೆ ರವಾನೆ

Suddi Udaya

ಉಜಿರೆ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ( ಸಿ.ಬಿ.ಎಸ್‌.ಇ ) ಯಲ್ಲಿ ಶಿಕ್ಷಕರಿಗೆ ಯೋಗ ತರಬೇತಿ

Suddi Udaya

ಐಟಿ ಪೆಸ್ಟ್ ನಲ್ಲಿ ಶ್ರೀ ಗುರುದೇವ ಕಾಲೇಜು ಸಮಗ್ರ ಚಾಂಪಿಯನ್

Suddi Udaya

ಧರ್ಮಸ್ಥಳ ಗಣಪತಿ ದೇವಸ್ಥಾನದ ವ್ಯವಸ್ಥಾಪಕರಾಗಿದ್ದ ಎಂ. ಕೃಷ್ಣ ಭಟ್ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿನಿ ಭಗವದ್ಗೀತೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!