38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಲಾಯಿಲ: ಚಾಲಕನ ನಿಯಂತ್ರಣ ತಪ್ಪಿದ ಕಾರು ಕಾಲೇಜಿನ ಕಂಪೌಂಡಿಗೆ ಡಿಕ್ಕಿ

ಲಾಯಿಲ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲೇಜಿನ ಕಂಪೌಂಡಿಗೆ ಡಿಕ್ಕಿ ಹೊಡೆದ ಘಟನೆ ಆ.6ರಂದು ಲಾಯಿಲದಲ್ಲಿ ನಡೆದಿದೆ.

ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿಯ ಖಾಸಗಿ ಕಾಲೇಜಿನ ಕಂಪೌಂಡಿಗೆ ಧರ್ಮಸ್ಥಳ ಕಡೆಯಿಂದ ಬೆಳ್ತಂಗಡಿಗೆ ಬರುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆವರಣ ಗೋಡೆ ಮಗುಚಿ ಬಿದ್ದು ಪಕ್ಕದಲ್ಲೇ ಇದ್ದ ಮರ ತಾಗಿ ಕಾರು ನಿಂತಿದೆ.

ಒಂದು ವೇಳೆ ಮರ ಇರದಿದ್ದರೆ ಕಾರು ಕಾಲೇಜಿನ ಆವರಣದೊಳಗೆ ಬಿದ್ದು ಅನಾಹುತ ಸಂಭವಿಸುತ್ತಿದ್ದು, ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ಚಾಲಕ ಪಡಂಗಡಿ ನಿವಾಸಿ ಎಂದು ತಿಳಿದು ಬಂದಿದೆ.

Related posts

ಬಳಂಜ: ಜನಮಂಗಳ ಕಾರ್ಯಕ್ರದಡಿ ಕಾಮೋಡ್ ಚೇರ್ ವಿತರಣೆ

Suddi Udaya

ಯುವಕರಿಬ್ಬರ ನಡುವೆ ಗಲಾಟೆ: ಮೂಗಿಗೆ ಕಚ್ಚಿ ಗಾಯಗೊಳಿಸಿದ ಸ್ನೇಹಿತ

Suddi Udaya

ಜೂ.21: ವೇಣೂರು ವಿದ್ಯುತ್ ನಿಲುಗಡೆ

Suddi Udaya

ಅಳದಂಗಡಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ತೆಕ್ಕಾರು: ಕುಟ್ಟಿಗಳ ಬಜಾರ್ ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಪದಗ್ರಹಣ

Suddi Udaya
error: Content is protected !!