ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಂದಾರು: ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರ ದಾಳಿ: ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳ ವಶ

ಬಂದಾರು : ಬಂದಾರು ಗ್ರಾಮದ ಪೇರಲ್ದಪಲ್ಕೆ ಎಂಬಲ್ಲಿನ ಗುಡ್ಡೆಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದಾಗ, ಧರ್ಮಸ್ಥಳ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ಕಿಶೋರ್ ಪಿ. ರವರು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದು, ಈ ವೇಳೆ ಕೋಳಿ ಅಂಕದಲ್ಲಿ ನಿರತರಾಗಿದ್ದ ದೇವಪ್ಪ, ಉಮ್ಮನ ಗೌಡ, ಪರಮೇಶ್ವರ, ರಾಮಣ್ಣ, ಬಾಲಕೃಷ್ಣ ಎಂಬ ಹೆಸರಿನ 5 ಮಂದಿಯನ್ನು ವಶಪಡಿಸಿಕೊಂಡ ಘಟನೆ ಆ.05 ರಂದು ಸಂಜೆ ನಡೆದಿದೆ.

ಸದ್ರಿಯವರ ವಶದಿಂದ ಒಟ್ಟು ನಗದು ರೂ. 5410/- ರೂಪಾಯಿ, 3 ಹುಂಜ ಕೋಳಿಗಳು, 2 ಸಂಖ್ಯೆಯ ಕೋಳಿ ಅಂಕಕ್ಕೆ ಬಳಸುವ ಕತ್ತಿಗಳನ್ನು ಹಾಗೂ ಸ್ಥಳದಲ್ಲಿದ್ದ 04 ದ್ವಿಚಕ್ರ ವಾಹನಗಳನ್ನು ಸ್ವಾಧೀನ ಪಡೆಸಿಕೊಂಡಿದ್ದು, ಪ್ರಕರಣದ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 58/2024 ಕಲಂ: 87 ಕರ್ನಾಟಕ ಪೊಲೀಸ್‌ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಬೆಳ್ತಂಗಡಿ: ಕೋಳಿ ಸಾಕಾಣಿಕೆದಾರರ ಸಮಾಲೋಚನಾ ಸಭೆ

Suddi Udaya

ವಿಪರೀತ ಮಳೆಗೆ ಮಿತ್ತಬಾಗಿಲು ಶಾಂತಿಗುಡ್ಡೆಯಲ್ಲಿ ಗುಡ್ಡ ಕುಸಿತ

Suddi Udaya

‘ವಿಕಸಿತ ಭಾರತ : ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚರಿಗೆ ಆಹ್ವಾನ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವ್ಹೀಲ್ ಚೇರ್ ಕೊಡುಗೆ

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಉಜಿರೆಯಲ್ಲಿ ರೈನಥಾನ್ ಸ್ಪರ್ಧೆ ಮಳೆಗಾಲದ ಓಟಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್ ಧರ್ಮ ಚಾಲನೆ ರೈನಥಾನ್ ಸ್ಪರ್ಧೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸ್ಪರ್ಧಾರ್ಥಿಗಳು

Suddi Udaya
error: Content is protected !!