24.8 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನಲ್ಲಿ ಸಿ.ಎ ಸಾಧಕರಿಗೆ ಸನ್ಮಾನ

ಉಜಿರೆ : ಪ್ರಸಕ್ತ ವರ್ಷದಲ್ಲಿ ಅಖಿಲ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ. ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಸಿ.ಎ ಅಶ್ವಥ್, ಸಿ.ಎ ಸುಕನ್ಯಾ ಕಾಮತ್, ಸಿ.ಎ ಕೇಶವ್ ಕಾಮತ್, ಮತ್ತು ಸಿ.ಎ ಮೆಘೇಶ್ ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಗುರಿ, ಪರಿಶ್ರಮ ದಿಂದ ಸಾಧನೆಯನ್ನು ಮಾಡಬಹುದು. ಅದೇ ರೀತಿ ಸೋತಾಗ ಆತ್ಮ ವಿಶ್ವಾಸ ಕಳೆದು ಕೊಳ್ಳಬಾರದು ಎಂದು ಸಿ.ಎ ಸಾಧಕ ಹಿರಿಯ ವಿದ್ಯಾರ್ಥಿಗಳು ಈಗಿನ ಪಿಯುಸಿಯ ಸಿ.ಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ ಇವರು ಸಾಧಕರನ್ನು ಸನ್ಮಾನಿಸಿ ಶುಭ ಹಾರೈಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಾದ ಭಾರ್ಗವಿ ಭಟ್ ನಿರೂಪಿಸಿ , ಕೃತಿ ವಂದಿಸಿದರು.

Related posts

ಬೆಳ್ತಂಗಡಿ ಹಾಗೂ ಗುರುವಾಯನಕೆರೆ ತಾಲೂಕು ಮಟ್ಟದ ಭಜನಾ ಪರಿಷತ್ ಸಭೆ

Suddi Udaya

ಪಟ್ರಮೆಯ ಹಿಂದೂ ಯುವಕನ ಜೊತೆ ನೆಲ್ಲಿಕಾರಿನ ಮುಸ್ಲಿಂ ಯುವತಿ ವಿವಾಹ

Suddi Udaya

ಕೊಜಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಳಂಜ ವಾಲಿಬಾಲ್ ಕ್ಲಬ್ ಗೆ ಸುರೇಶ್ ಪೂಜಾರಿ ಹೇವರವರಿಂದ ಚಾಂಪಿಯನ್ ಟ್ರೋಫಿ ಹಸ್ತಾಂತರ

Suddi Udaya

ನಾಳ: ಶಿವ ದುರ್ಗಾ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

Suddi Udaya

ಮಾ.14-15: ನಿಡ್ಲೆ ಬೂಡುಜಾಲು ನಾಡ ದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರಾ ಮಹೋತ್ಸವ

Suddi Udaya
error: Content is protected !!