25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿ

ಭಾರೀ ಹದಗೆಟ್ಟ ಕಳಿಯ ದೇರ್ಜಾಲು ರಸ್ತೆ: ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ


ಬೆಳ್ತಂಗಡಿ : ಕಳಿಯ ಗ್ರಾಮದ ದೇರ್ಜಾಲು ರಸ್ತೆ ಭಾರೀ ಮಳೆಗೆ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ತುಂಬಾ ಹದಗೆಟ್ಟಿದೆ. ಪಂಚಾಯತ್ ಮತ್ತು ಖಾಸಗಿ ರಸ್ತೆಯೆಂದು ಮುಸುಕಿನ ಗುದ್ದಾಟದಲ್ಲಿ ಹದಗೆಟ್ಟ ಕೆಸರಿನಲ್ಲಿ ಓಡಾಡುವುದಕ್ಕೆ ಭಾರೀ ತೊಂದರೆ ಅಗುತ್ತದೆ.

ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ವತಿಯಿಂದ ವರ್ಷಕ್ಕೊಮ್ಮೆ ಚರಂಡಿ ರಿಪೇರಿ ಮತ್ತು ರಸ್ತೆಯ ನಿರ್ವಹಣೆ ಆಗುತ್ತಿತ್ತು. ವರ್ಷಗಳ ನಂತರ ರಸ್ತೆಯನ್ನು ಖಾಸಗಿ ರಸ್ತೆಯಾಗಿ ಮಾಡಬೇಕೆಂದು ಕಳಿಯ ಗ್ರಾಮ ಪಂಚಾಯತ್ ಗೆ ಓರ್ವ ವ್ಯಕ್ತಿ ಹತ್ತಾರು ಮನೆಯವರ ಸಹಿ ಸಂಗ್ರಹಿಸಿ ಮನವಿಯನ್ನು ಪಂಚಾಯತ್ ಗೆ ನೀಡಿದರು ಎಂದು ತಿಳಿದು ಬಂದಿದೆ. ಆದರೂ ಮೂರ್ನಾಲ್ಕು ಮನೆಯವರು

ಸೇರಿಕೊಂಡು ಸ್ವಂತ ಖರ್ಚಿನಲ್ಲಿ ರಸ್ತೆಯ ನಿರ್ವಹಣೆ ಮಾಡಿ ಕೊಂಡು ಬಂದಿದ್ದಾರೆ. ಈಗಾಗಲೇ ಸ್ವಂತ ಖರ್ಚಿನಲ್ಲಿ 3 ಪೀಕಪ್ ಜಲ್ಲಿ ಹುಡಿ ಹಾಕಿದರೂ ಇತ್ತೀಚಿನ ಭಾರೀ ಮಳೆಯ ಅನಾಹುತಕ್ಕೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.
ಅದುದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ,ಅನಾರೋಗ್ಯ ಬಾಧಿತರಿಗೆ ಮತ್ತು ವಾಹನ ಸಂಚಾರಕ್ಕೆ ಪದೆ,ಪದೆ ಸಮಸ್ಯೆಯಾಗುತ್ತಿದೆ.
ಪಂಚಾಯತ್ ಜನಪ್ರತಿ ನಿಧಿಗಳು, ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸ ಬೇಕು. ಹಾಗೂ ಸಾರ್ವಜನಿಕ ಹದಗೆಟ್ಟ ರಸ್ತೆ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

ಅ.20 ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

Suddi Udaya

ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅಂತರಿಕ ಕಚ್ಚಾಟ ಬಹಿರಂಗ: ಬೂತುಗಳಲ್ಲಿ ಹಣ ಸಮರ್ಪಕವಾಗಿ ನಿರ್ವಹಣೆಯಾಗಿಲ್ಲ ಎಂದು ಹೇಳಿದ ಕಾರ್ಯಕರ್ತನನ್ನು ತಡೆದ ಬಂಗೇರ: ಬಂಗೇರ ಮಾತನ್ನು ವಿರೋಧಿಸಿ, ಸಭೆಯಿಂದ ಹೊರ ನಡೆದ ಪತ್ರಕರ್ತರು

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ “ಸಾಧನಾ ಪ್ರಶಸ್ತಿ”

Suddi Udaya

ಸಹಾಯಕ ಆಯುಕ್ತರ ಕಚೇರಿಗೆ ಹಾಜರಾಗುವ ಮುನ್ನ ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ

Suddi Udaya

ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾ, ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ನೆರಿಯ ಬಾಂಜಾರುಮಲೆಯ ಅರಣ್ಯವಾಸಿ ಜನರೊಂದಿಗೆ ಶಕ್ತಿವಂದನಾ ಕಾರ್ಯಕ್ರಮ

Suddi Udaya
error: Content is protected !!