25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ಬಾಲಕ ಮತ್ತು ಬಾಲಕಿಯರಿಗೆ ಪ್ರಥಮ ಸ್ಥಾನ

ಮಡಂತ್ಯಾರು: ಪುಂಜಾಲಕಟ್ಟೆ ಮತ್ತು ಗುರುವಾಯನಕೆರೆ ವಲಯಗಳ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಮಡಂತ್ಯಾರು ಇವರ ಪ್ರಾಯೋಜಕತ್ವದಲ್ಲಿ ಆಗಸ್ಟ್ 7ರಂದು ಸೇಕ್ರೆಡ್ ಹಾರ್ಟ್ ಒಳ ಕ್ರೀಡಾಂಗಣದಲ್ಲಿ ನಡೆಯಿತು.

ಈ ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 14 ರ ವಯೋಮಾನದ ಪ್ರಾಥಮಿಕ ಹಂತದ ಬಾಲಕರ ವಿಭಾಗದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳಾದ ಜೇವಿಸ್ ಡಿಕುನ್ಹಾ, ಜೀತನ್ ಸಿಕ್ವೇರಾ, ಜಿಯಾನ್ ಸಿಕ್ವೇರಾ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳಾದ ಎಲ್ಟನ್ ಡಿಸೋಜ, ಚಿರಾಯು ರವೀಂದ್ರ ಪೂಜಾರಿ ಇವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಹಾಗೂ 14ರ ವಯೋಮಾನದ ಪ್ರಾಥಮಿಕ ಹಂತದ ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಾದ ಆದ್ಯ ಜೆ, ಸುಶ್ಮಿತಾ ಶೆಣೈ, ಅನ್ಯ ಪಿ ಜೈನ್, ಫ್ಲಾವಿಟ ಲಿವಿಯ ಡಿಸೋಜ, ನಿಶೆಲ್ ರಿಯೋನ ಡಿಸೋಜ ಇವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ವಲೇರಿಯನ್ ಡಿಸೋಜ ಮತ್ತು ಮಂಜುನಾಥರವರು ತರಬೇತಿಯನ್ನು ನೀಡಿರುತ್ತಾರೆ.

Related posts

ಉಜಿರೆ ಶ್ರೀ ಧ.ಮಂ. ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಸಂತೋಷ್‌ ಆಲ್ಬರ್ಟ್ ಸಲ್ಡಾನ ರವರಿಗೆ ಡಾಕ್ಟರೇಟ್ ಪದವಿ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿ ಮಹಾಸಭೆ

Suddi Udaya

ಜ.12: ಮುಂಡಾಜೆಯಲ್ಲಿ ಸಾವಿರದ ಸಾಧಕರು ಮನೆಮನದ ಸಮ್ಮಾನ:

Suddi Udaya

ಹಾವುಗಳ ಸಂರಕ್ಷಕರಾದ ಸ್ನೇಕ್ ಅಶೋಕ್ ನಾಗರ ಹಾವು ಹಿಡಿಯುವ ವೇಳೆ ಹಾವು ಕಚ್ಚಿ ಮಂಗಳೂರು ಆಸ್ಪತ್ರೆಗೆ ದಾಖಲು

Suddi Udaya

ಕೊಕ್ಕಡ: ಅನಂತರಾಮ ಉಪ್ಪಾರ್ಣ ನಿಧನ

Suddi Udaya

ಧರ್ಮಸ್ಥಳ: ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಗತಿಯ ಸಮಾರೋಪ ಸಮಾರಂಭ

Suddi Udaya
error: Content is protected !!