23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿ

ಮೇಲಂತಬೆಟ್ಟು ಗ್ರಾಮದ ನಾಗ ಬ್ರಹ್ಮ ಬದಿನಡೆ ಬಳಿಯ ಮನೆ ಹಾನಿ ಹಾಗೂ ಭೂಕುಸಿತ ಪ್ರದೇಶ , ಸವಣಾಲು ಗ್ರಾಮದ ಪಿಲಿಕಲ ರಸ್ತೆ ಭೂಕುಸಿತವಾದ ಪ್ರದೇಶಕ್ಕೆ ಕೇಂದ್ರ ಸರಕಾರದ Ndrf ಮತ್ತು ಜಿಎಸ್ಐ ತಂಡ ಭೇಟಿ

ಬೆಳ್ತಂಗಡಿ : ವಿಪರೀತ ಮಳೆಯಿಂದ ಭೂ ಕುಸಿತವಾಗಿ ಹಾನಿಯಾದ ಬೆಳ್ತಂಗಡಿ ತಾಲೂಕಿನ ಮೂರು ಪ್ರದೇಶಕ್ಕೆ ಕೇಂದ್ರ ಸರಕಾರದ ಎರಡು ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ನಗರದ ಕಲ್ಲಗುಡ್ಡೆ ಟ್ರೀ ಪಾರ್ಕ್ ಬಳಿಯ ಭೂಕುಸಿತ ,ಮೇಲಂತಬೆಟ್ಟು ಗ್ರಾಮದ ನಾಗ ಬ್ರಹ್ಮ ಬದಿನಡೆ ಬಳಿಯ ಮನೆ ಹಾನಿ ಹಾಗೂ ಭೂಕುಸಿತ ಪ್ರದೇಶ , ಸವಣಾಲು ಗ್ರಾಮದ ಪಿಲಿಕಲ ರಸ್ತೆ ಭೂಕುಸಿತವಾದ ಪ್ರದೇಶಕ್ಕೆ ಕೇಂದ್ರ ಸರಕಾರದ NDRF ತಂಡ ಮತ್ತು GSI ತಂಡ ಆ.8 ರಂದು ಸಂಜೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕೇಂದ್ರ ಸರಕಾರದ ಬೆಂಗಳೂರು ಕ್ಯಾಪ್ ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಇನ್ಸ್ಪೆಕ್ಟರ್ ಶಾಂತಿ ಲಾಲು ಮತ್ತು ತಂಡದ ಸಿಬ್ಬಂದಿಗಳು ಹಾಗೂ GSI (geological serve of india) ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಬ್ಬರು ಅಧಿಕಾರಿಗಳು ಜಂಟಿಯಾಗಿ ಆ. 8 ರಂದು ಸಂಜೆ ಬೆಳ್ತಂಗಡಿಯ ಮೂರು ಪ್ರದೇಶಗಳಿಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ , ಕಂದಾಯ ಇನ್ಸ್ಪೆಕ್ಟರ್ ಪ್ರತೀಷ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿ ಮಾಹಿತಿ ಕಲೆ ಹಾಕಿ ತೆರಳಿದ್ದಾರೆ‌.

Related posts

ಆರಂಬೋಡಿ: ಗಂಟಲಿನ ಚಿಕ್ಕ ಪೊರೆಯ ಸಮಸ್ಯೆಯಿಂದ ಬಳಲುತ್ತಿರುವ 2ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗಿ

Suddi Udaya

ಅಪಾಯದಂಚಿನಲ್ಲಿರುವ ಗುರಿಪಳ್ಳ ತಾರಗಂಡಿ ಸೇತುವೆ: ಸ್ಥಳಕ್ಕೆ ಬೇಟಿ ನೀಡಿದ ರಕ್ಷಿತ್ ಶಿವರಾಂ ಅತೀ ಶೀಘ್ರದಲ್ಲೇ ಹೊಸ ಸೇತುವೆ ನಿರ್ಮಾಣದ ಭರವಸೆ

Suddi Udaya

ಕೊಕ್ಕಡ: ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ವೇಣೂರು ಪದ್ಮಾಂಬ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya

ಕೊಕ್ಕಡ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಪಿಟ್ ಇಂಡಿಯಾ ಕಾರ್ಯಕ್ರಮ

Suddi Udaya

ಎಮ್.ಆರ್.ಪಿ.ಎಲ್ – ಸಿಎಸ್ಆರ್ ಯೋಜನೆಯಡಿ “ಶ್ರೀ ಕೃಷ್ಣ ಯೋಗಕ್ಷೇಮ” ಅಂಬುಲೆನ್ಸ್ ಹಸ್ತಾಂತರ

Suddi Udaya
error: Content is protected !!