ಧರ್ಮಸ್ಥಳ ನೇರ್ತನೆಯಲ್ಲಿ ಕಾಡಾನೆ ದಾಳಿ :ಕೃಷಿಗೆ ಹಾನಿ   

Suddi Udaya

 ಉಜಿರೆ:  ಧರ್ಮಸ್ಥಳ ಗ್ರಾಮದ ನೇರ್ತನೆಯಲ್ಲಿ ಕಾಡಾನೆಗಳು ನಿರಂತರವಾಗಿ ಕೃಷಿಭೂಮಿಗೆ ನುಗ್ಗಿ ಕೃಷಿಗೆ ಹಾನಿ ಯುಂಟುಮಾಡುತ್ತಿದೆ.ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳ ಉಪಟಳ ತೀವ್ರಗೊಂಡಿದೆ.ನೇರ್ತನೆ ನಿವಾಸಿ ತಂಗಚ್ಚನ್ ಎನ್.ಪಿ  ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಹತ್ತಕ್ಕೂ ಅಧಿಕ ತೆಂಗಿನ ಗಿಡಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದೆ. ಇಲ್ಲಿನ ನಿವಾಸಿ ಜೋ ಸೆಫ್. ಪಿ.ಕೆ ಎಂಬವರ ತೋಟಕ್ಕೂ ಕಾಡಾನೆ ನುಗ್ಗಿದೆ, ಇಲ್ಲಿಯೂ ಅಡಕೆ ಹಾಗೂ ತೆಂಗಿನ ಗಿಡಗಳಿಗೆ ಹಾನಿಯುಂಟು ಮಾಡಿದೆ. ಇಲ್ಲಿ ಸಮೀಪದ ಇತರ ತೋಟಗಳಿಗೂ ಕಾಡಾನೆಗಳು ನುಗ್ಗುತ್ತಿದ್ದು ಕೃಷಿಗೆ ಹಾನಿಯುಂಟುಮಾಡುತ್ತಿದೆ. ಒಂದು ಮರಿಯಾನೆ ಸಹಿತ ಮೂರು ಆನೆಗಳು ಈ ಹಿಂಡಿ ನಲ್ಲಿದ್ದು  ಸಂಜೆಯಾಗುವಾಗಲೇ ಕಾಡಾನೆಗಳು ತೋಟಗಳಿಗೆ ನುಗ್ಗುತ್ತಿದೆ.ಹಗಲು ಹೊತ್ತಿನಲ್ಲಿಯೂ ಕಾಡಾನೆಗಳು ತೋಟಗಳ ಪರಿಸರದಲ್ಲಿ ಕಾಣಿಸುತ್ತಿದೆ. ಇದು ಜನರಲ್ಲಿ ಭಯ ಮೂಡಿಸಲು ಕಾರಣವಾಗಿದೆ.  ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳುವಂತೆ ಕೃಷಿಕರು ಒತ್ತಾಯಿಸುತ್ತಿದ್ದಾರೆ

Leave a Comment

error: Content is protected !!