25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಶಾಸಕ ಹರೀಶ್ ಪೂಂಜ ಹಾಗೂ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ‘ದಸ್ಕತ್’ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಹಾಗೂ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಇಂದು ಹೊಸ ‘ದಸ್ಕತ್’ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅರ್ಪಿಸುವ
ಸೆವೆಂಟಿ ಸೆವೆನ್ ಸ್ಟೂಡಿಯೋಸ್, ರಾಘವೇಂದ್ರ ಕುಡ್ವರವರ ನಿರ್ಮಾಣದ ದಸ್ಕತ್ ತುಳು ಚಲನಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡು , ತಂಡವು ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಯಲ್ಲಿ ಬಿಡುಗಡೆಗೊಳಿಸಿದೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಈ ಚಿತ್ರದ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ.

ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೇಶ್ ಶೆಟ್ಟಿ, ಕಾರ್ಯ ನಿರ್ವಹಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆಯವರ ಛಾಯಾಗ್ರಹಣದ ಈ ಚಿತ್ರವನ್ನು ಗಣೇಶ್ ನೀರ್ಚಾಲ್ ರವರು ಸಂಕಲನ ಮಾಡಿದ್ದಾರೆ.
ಸಮರ್ಥನ್ ಎಸ್ ರಾವ್ ರವರ ಸಂಗೀತವಿದೆ.
ದೀಕ್ಷಿತ್ ಕೆ ಅಂಡಿಂಜೆ ,ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ , ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ, ನೀರಜ್ ಕುಂಜರ್ಪ, ಮಿಥುನ್ ರಾಜ್, ತಿಮ್ಮಪ್ಪ ಕುಲಾಲ್, ಯೋಗಿಶ್ ಶೆಟ್ಟಿ .,ಚೇತನ್ ಪಿಲಾರ್ ಹೀಗೆ ಇನ್ನೂ ಅನೇಕ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ನಾಯಕಿಯಾಗಿ ಭವ್ಯ ಪೂಜಾರಿಯವರು ಬಣ್ಣ ಹಚ್ಚಿದ್ದಾರೆ.
ಚಲನಚಿತ್ರವು ಬೋಧಿ ಪ್ರೋಡಕ್ಷನ್ಸ್ ಸಹಯೋಗದೊಂದಿಗೆ ಮೂಡಿಬಂದಿದೆ.
ತಂಡದಲ್ಲಿ ಸ್ಮಿತೇಶ್ ಬಾರ್ಯ,ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ , ಮನೋಜ್ ಆನಂದ್ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ.

Related posts

ನಿಟ್ಟಡೆ: ಕುಂಭಶ್ರೀ ವಿದ್ಯಾಸಂಸ್ಥೆಗೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಭೇಟಿ

Suddi Udaya

ತೆಕ್ಕಾರು: ಗಾಂಜಾ ನಶೆಯಲ್ಲಿ ಅನುಚಿತ ವರ್ತನೆ: ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya

ಅ.17: ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಇದರ ನೇತೃತ್ವದಲ್ಲಿ ಅಂಗಾಂಗ ದಾನ ನೊಂದಣಿ

Suddi Udaya

ನಾವೂರು ಗ್ರಾಮ ಪಂಚಾಯತ್‌ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬಳಂಜ ಗ್ರಾ.ಪಂ ಹಾಗೂ ಅರಣ್ಯ ಇಲಾಖೆಯಿಂದ ವನಮಹೋತ್ಸವ ಆಚರಣೆ

Suddi Udaya

ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಭಿನ್ನಮತ ಸ್ಫೋಟ: ಎರಡು ಬಣಗಳ ನಡುವೆ ಮಾತಿನ ಚಕಮಕಿ: ಬೆಳ್ತಂಗಡಿ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಬುಗಿಲೆದ್ದ ಭಿನ್ನಮತ

Suddi Udaya
error: Content is protected !!