September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳದಲ್ಲಿ “ಕೆಸರ್‌ಡ್ ಒಂಜಿ ದಿನ”

ಧರ್ಮಸ್ಥಳ: ಮೂಡಂಗಲ್ ಫ್ರೆಂಡ್ಸ್ ಬಳಗದ ಆಶ್ರಯದಲ್ಲಿ ಆ.11ರಂದು ಧರ್ಮಸ್ಥಳದಲ್ಲಿ ಆಯೋಜಿಸಿದ “ಕೆಸರ್‌ಡ್ ಒಂಜಿ ದಿನ” ಕಾರ್ಯಕ್ರಮವನ್ನು ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್ ಕಾರ್ಯದರ್ಶಿ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ. ವಿ. ಶೆಟ್ಟಿ ಉದ್ಘಾಟಿಸಿದರು.


ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಸಂಘಟಿತರಾಗಿ ಆಯೋಜಿಸುವ ಇಂತಹ ಕಾರ್ಯಕ್ರಮಗಳಿಂದ ಪರಸ್ಪರ ಪ್ರೀತಿ-ವಿಶ್ವಾಸ, ಆತ್ಮೀಯತೆ ಹೆಚ್ಚಾಗಿ ಸಾಮಾಜಿಕ ಸಾಮರಸ್ಯ ಮೂಡಿಬರುತ್ತದೆ ಎಂದು ಎ. ವಿ. ಶೆಟ್ಟಿ ಹೇಳಿದರು.ದೈಹಿಕ ಮತ್ತು ಮಾನಸಿಕ ಆರೋಗ್ಯವರ್ಧನೆಗೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಹೇಳಿದ ಅವರು ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು.


ದೇವಸ್ಥಾನದ ಪಾರುಪತ್ಯಗಾರ್ ಲಕ್ಷ್ಮಿನಾರಾಯಣ್ ರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ವಿಮಲಾ, ವಕೀಲರಾದ ಕೇಶವ ಬೆಳಾಲ್, ಧನಕೀರ್ತಿ ಆರಿಗ, ಮುರಳಿಧರ ದಾಸ್, ಹರ್ಷ ಜೈನ್ ಮತ್ತು ಗದ್ದೆಯ ಮಾಲಕ ಕೃಷ್ಣಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related posts

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ವಾರ್ಷಿಕ ಜಾತ್ರಾಮಹೋತ್ಸವ: ಧಾರ್ಮಿಕ ಸಭೆ

Suddi Udaya

ಕಳೆಂಜ: ಕೊತ್ತೋಡಿ ನಿವಾಸಿ ಚನ್ನಕ್ಕ ನಿಧನ

Suddi Udaya

ಕುಣಿತಾ ಭಜನೆಯಲ್ಲಿ ಶ್ರೀ ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ತಂಡಕ್ಕೆ ಪ್ರಥಮ ಸ್ಥಾನ

Suddi Udaya

ಉಜಿರೆ ಶ್ರೀ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್: ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಭೇಟಿ ಪರಿಶೀಲನೆ: 241 ಮತಗಟ್ಟೆಗಳಿಗೆ ಮತ ಪೆಟ್ಟಿಗೆ ಹಾಗೂ ಪರಿಕರಗಳ ವಿತರಣೆ ಆರಂಭ

Suddi Udaya

ಬೆಳ್ತಂಗಡಿ: ನೇಮಿರಾಜ್ ಬುಣ್ಣು ನಿಧನ

Suddi Udaya

ಹೊಸಪಟ್ಣ: ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕಸಭೆ

Suddi Udaya
error: Content is protected !!