23.5 C
ಪುತ್ತೂರು, ಬೆಳ್ತಂಗಡಿ
April 4, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಬಳಂಜ‌ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಯುವ ಸಾಧಕಿ ಮಾನ್ಯರವರಿಗೆ ಸನ್ಮಾನ

ಬೆಳ್ತಂಗಡಿ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಇದರ ವತಿಯಿಂದ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಚುಟುಕು ಸಾಹಿತ್ಯ ಪರಿಷತ್ ಬೆಳ್ತಂಗಡಿ ಘಟಕದ ಸಹಕಾರದಲ್ಲಿ ಪದಗ್ರಹಣ ಸಮಾರಂಭದಲ್ಲಿ ಭಜನಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸಾಧನೆಗಾಗಿ ಬಳಂಜ ಬ್ರಹ್ಮಶ್ರೀ ಕುಣಿತ ಭಜನೆ ಮಂಡಳಿಯ ಮಾನ್ಯ ಇವರನ್ನು ಸನ್ಮಾನಿಸಲಾಯಿತು,

ಸಣ್ಣ ವಯಸ್ಸಿನಲ್ಲಿ ಹಲವಾರು ಸಾಧನೆಯನ್ನು ಮಾಡಿ ಬಹುಮುಖ ಪ್ರತಿಭೆಯಾಗಿ ಸಮಾಜಕ್ಕೆ ಸ್ಪೂರ್ತಿಯಾಗಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿ ಆಮಂತ್ರಣ ಪರಿವಾರ ವಿಜಯಕುಮಾರ್ ಜೈನ್ ಇವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು,

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಪ್ರವೀಣ್ ಕೋಡಿಯಾಲ್ ಬೈಲ್, ಹಿರಿಯರಾದ ಬಿ ಭುಜಬಲಿ ಧರ್ಮಸ್ಥಳ,ಜಾನಪದ ಪರಿಷತ್ ಬೆಳ್ತಂಗಡಿ ಘಟಕದ ಪ್ರಧಾನ ಸಂಚಾಲಕಿ ಕಾವ್ಯಶ್ರೀ ನಾಯಕ್ ಅಜೇರು, ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ಕಾರ್ಯದರ್ಶಿ ರಾಮಕೃಷ್ಣ ಭಟ್ ಧರ್ಮಸ್ಥಳ, ಬ್ರಹ್ಮಶ್ರೀ ಕುಣಿತ ಭಜನೆ ಮಂಡಳಿಯ ಸಂಚಾಲಕರು ಹರೀಶ್ ವೈ ಚಂದ್ರಮ,ಪ್ರಣವ್ ಸಭಾಂಗಣದ ಮಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

ಗೆಜ್ಜೆಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಸುರೇಶ್ ಅವರಿಗೆ  ಬೀಳ್ಕೊಡುಗೆ

Suddi Udaya

ನಡ: ಸಿಡಿಲು ಬಡಿದು 2 ವರ್ಷದ ಮಗು ಅಸ್ವಸ್ತ

Suddi Udaya

ಮಲವಂತಿಗೆ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಅರಸಿನಮಕ್ಕಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ: ನವಶಕ್ತಿ ಆಟೋ ಚಾಲಕ ಮಾಲಕ ಸಂಘದಿಂದ ಅಂಗನವಾಡಿ ಕೇಂದ್ರಕ್ಕೆ ಚಯರ್ ಕೊಡುಗೆ

Suddi Udaya

ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸ. ಹಿ. ಪ್ರಾ. ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

Suddi Udaya
error: Content is protected !!