31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಕೆಸರಲ್ಲಿ ಕಸರತ್ತು – ವಿಶೇಷ ಸ್ಪರ್ಧೆಗಳ ಆಯೋಜನೆ

ಉಜಿರೆ: ಬೇಸಾಯ ಕಾಲದಲ್ಲಿ ಕರಾವಳಿ ಜನರಿಗೆ ಉತ್ಸವ ಕಾಲ. ಇಲ್ಲಿನ ಜನರು ಗದ್ದೆಗಳಲ್ಲಿ ತಮ್ಮ ಬಹುತೇಕ ಜೀವನ ಕಾಣುವವರು. ಇಂತಹ ಗದ್ದೆಗಳಲ್ಲಿ ಹಿಂದಿನ ಆಟೋಟಗಳು ಮರೆಯಾಗುತ್ತಿವೆ. ಅನೇಕ ಚರ್ಮರೋಗಗಳಿಗೆ ಕೆಸರು ಔಷಧವಾಗಿದೆ. ಈಗಿನ ಕಾಲದ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳ ಮೂಲಕವಾದರೂ ಕೆಸರಿನ ಪರಿಚಯ ಆಗುತ್ತಿರುವುದು ಸಂತೋಷದಾಯಕ ವಿಚಾರ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಜಿರೆಯ ಪೆರ್ಲದ ಕೆಸರು ಗದ್ದೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ನಡೆದ ಕೆಸರಿನಲ್ಲಿ ಕಸರತ್ತು ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಥಳೀಯ ಪ್ರಗತಿಪರ ಕೃಷಿಕ ರಾಮಣ್ಣ ನಾಯ್ಕ್ ಸ್ಪರ್ಧೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆಸರು ಗದ್ದೆ ಆಟೋಟಗಳಿಗೆ ಸಂಬಂಧಿಸಿದ ವಿಶೇಷವಿರುವ ಭಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕೆಸರು ಗದ್ದೆಯಲ್ಲಿ ಓಟ , ಉಪ್ಪು ಮೂಟೆ , ಸೋಗೆ ಎಳೆಯುವುದು , ಹಗ್ಗ ಜಗ್ಗಾಟ , ವಾಲಿಬಾಲ್ ಮುಂತಾದ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ರಾ.ಸೇ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಕಾರ್ಯಕ್ರಮಾಧಿಕಾರಿ ಪದ್ಮಶ್ರೀ ರಕ್ಷಿತ್ , ಹಿರಿಯ ಸ್ವಯಂ ಸೇವಕರಾದ ಧನುಷ್ ಕೆ. ಪಿ , ಶಶಿರಾಜ್ , ಭರತ್ ಕೆ , ಸಾಯಿ ಕಿರಣ್ , ಭರತ್ ರಾವ್ , ವೀರೇಶ್ ಮುಂತಾದವರು ಉಪಸ್ಥಿತರಿದ್ದರು.

ಸ್ವಯಂ ಸೇವಕಿ ಅಂಜನಾ ಸ್ವಾಗತಿಸಿದರು. ಘಟಕದ ನಾಯಕಿ ಪ್ರಾಪ್ತಿ ಗೌಡ ನಿರೂಪಿಸಿ , ವಂದಿಸಿದರು.

Related posts

ಬೆದ್ರಬೆಟ್ಟು: ಜಲ್ಸತುಲ್ ಜಮೀಲ್ ಮಿಲಾದ್ 2024 ಪ್ರತಿಭಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಗ್ರಾ.ಪಂ. ಪಿಡಿಒ ಉಮೇಶ್ ಕೆ. ಸೇವಾ ನಿವೃತ್ತಿ: ಧರ್ಮಸ್ಥಳ ಬೀಳ್ಕೊಡುಗೆ ಸಮಾರಂಭ ಸಮಿತಿಯಿಂದ ಬೀಳ್ಕೊಡುಗೆ

Suddi Udaya

ಉಪ್ಪಾರಪಳಿಕೆ ಸರಕಾರಿ ಉ. ಹಿ.ಪ್ರಾ. ಶಾಲೆಯಲ್ಲಿ 400 ಅಡಿಕೆ ಗಿಡ ನೆಡುವ ಕಾರ್ಯಕ್ರಮ

Suddi Udaya

ಬಿಜೆಪಿ ಜಿಲ್ಲಾ ಮಟ್ಟದ ವಿವಿಧ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿಗಳ ನೇಮಕ

Suddi Udaya

ಪಣಕಜೆ:ಆಸರೆ ಜ್ಞಾನ ವಿಕಾಸ ಕೇಂದ್ರದ ಮಾಸಿಕ ಸಭೆ: ಆರೋಗ್ಯ ತಪಾಸಣೆ, ಪರಿಸರದಲ್ಲಿ ಸ್ವಚ್ಚತೆ ಕಾಪಾಡುವುದರ ಬಗ್ಗೆ ಮಾಹಿತಿ

Suddi Udaya

ಮದ್ದಡ್ಕ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಭ್ಯರ್ಥಿಗಳ ಅವಿರೋಧ ಆಯ್ಕೆ

Suddi Udaya
error: Content is protected !!