September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಕೆಸರಲ್ಲಿ ಕಸರತ್ತು – ವಿಶೇಷ ಸ್ಪರ್ಧೆಗಳ ಆಯೋಜನೆ

ಉಜಿರೆ: ಬೇಸಾಯ ಕಾಲದಲ್ಲಿ ಕರಾವಳಿ ಜನರಿಗೆ ಉತ್ಸವ ಕಾಲ. ಇಲ್ಲಿನ ಜನರು ಗದ್ದೆಗಳಲ್ಲಿ ತಮ್ಮ ಬಹುತೇಕ ಜೀವನ ಕಾಣುವವರು. ಇಂತಹ ಗದ್ದೆಗಳಲ್ಲಿ ಹಿಂದಿನ ಆಟೋಟಗಳು ಮರೆಯಾಗುತ್ತಿವೆ. ಅನೇಕ ಚರ್ಮರೋಗಗಳಿಗೆ ಕೆಸರು ಔಷಧವಾಗಿದೆ. ಈಗಿನ ಕಾಲದ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳ ಮೂಲಕವಾದರೂ ಕೆಸರಿನ ಪರಿಚಯ ಆಗುತ್ತಿರುವುದು ಸಂತೋಷದಾಯಕ ವಿಚಾರ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಜಿರೆಯ ಪೆರ್ಲದ ಕೆಸರು ಗದ್ದೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ನಡೆದ ಕೆಸರಿನಲ್ಲಿ ಕಸರತ್ತು ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಥಳೀಯ ಪ್ರಗತಿಪರ ಕೃಷಿಕ ರಾಮಣ್ಣ ನಾಯ್ಕ್ ಸ್ಪರ್ಧೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆಸರು ಗದ್ದೆ ಆಟೋಟಗಳಿಗೆ ಸಂಬಂಧಿಸಿದ ವಿಶೇಷವಿರುವ ಭಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕೆಸರು ಗದ್ದೆಯಲ್ಲಿ ಓಟ , ಉಪ್ಪು ಮೂಟೆ , ಸೋಗೆ ಎಳೆಯುವುದು , ಹಗ್ಗ ಜಗ್ಗಾಟ , ವಾಲಿಬಾಲ್ ಮುಂತಾದ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ರಾ.ಸೇ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಕಾರ್ಯಕ್ರಮಾಧಿಕಾರಿ ಪದ್ಮಶ್ರೀ ರಕ್ಷಿತ್ , ಹಿರಿಯ ಸ್ವಯಂ ಸೇವಕರಾದ ಧನುಷ್ ಕೆ. ಪಿ , ಶಶಿರಾಜ್ , ಭರತ್ ಕೆ , ಸಾಯಿ ಕಿರಣ್ , ಭರತ್ ರಾವ್ , ವೀರೇಶ್ ಮುಂತಾದವರು ಉಪಸ್ಥಿತರಿದ್ದರು.

ಸ್ವಯಂ ಸೇವಕಿ ಅಂಜನಾ ಸ್ವಾಗತಿಸಿದರು. ಘಟಕದ ನಾಯಕಿ ಪ್ರಾಪ್ತಿ ಗೌಡ ನಿರೂಪಿಸಿ , ವಂದಿಸಿದರು.

Related posts

ಕುವೆಟ್ಟು ಗ್ರಾ.ಪಂ ಸದಸ್ಯೆ ಮೋಹಿನಿ ಅಸೌಖ್ಯದಿಂದ ನಿಧನ

Suddi Udaya

ಅಸಂಘಟಿತ ಕಾರ್ಮಿಕ ನಗರ ಸಮಿತಿ & ಗ್ರಾಮೀಣ ಸಮಿತಿಯ ವತಿಯಿಂದ ಪದಾಧಿಕಾರಿಗಳ & ಕಾರ್ಯಕರ್ತರ ಸಮಲೋಚನೆ ಸಭೆ

Suddi Udaya

ಜ್ವರದಿಂದ ಬಳಲಿ ಗಂಡಿಬಾಗಿಲಿನ ಯುವತಿ ಸಾವು

Suddi Udaya

ಗೇರುಕಟ್ಟೆ: ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟನೆ

Suddi Udaya

ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಪ. ಪೂ. ಕಾಲೇಜಿನ ಬಾಲಕಿಯರ ತಂಡ ಚಾಂಪಿಯನ್

Suddi Udaya

ಬೆಳ್ತಂಗಡಿ ಹಾಗೂ ವೇಣೂರಿನಲ್ಲಿ 10ಎಂ.ವಿ.ಎ ಸಾಮರ್ಥ್ಯದ ವಿದ್ಯುತ್ ಸ್ಥಾವರಗಳ ಸ್ಥಾಪಿಸುವಂತೆ ಸಚಿವರಿಗೆ ಮನವಿ

Suddi Udaya
error: Content is protected !!