24.4 C
ಪುತ್ತೂರು, ಬೆಳ್ತಂಗಡಿ
May 20, 2025
ವರದಿ

ಮಾಚಾರ್ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಯಲ್ಲಿ 78ರ ಸ್ವಾತಂತ್ರ್ಯ ಸಂಭ್ರಮ ಹಾಗೂ ಪವರ್ ಮೆನ್‌ಗೆ ಗೌರವಾರ್ಪಣೆ

ಉಜಿರೆ: ಮಾಚಾರ್ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ವಠಾರದಲ್ಲಿ 78ರ ಸ್ವಾತಂತ್ರ್ಯವು ಬಹಳ ವಿಜ್ರಂಭನೆಯಿಂದ ನಡೆಯಿತು.


ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷರಾದ ಬಿ.ಎಮ್ ಇಲ್ಯಾಸ್ ರವರು ನಿರ್ವಹಿಸಿದರು. ಖತೀಬುಸ್ತಾದರಾದ ಸಲೀಂ ಸಖಾಫಿ ರವರು ಸಂದೇಶ ಭಾಷಣ ಹಾಗೂ ದುಆ ನಿರ್ವಹಿಸಿದರು. ಸಮಾರಂಭದಲ್ಲಿ ವಿಧ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರ ರ ಬಗ್ಗೆ ಭಾಷಣ ನಡೆಯಿತು.

ಪವರ್‌ಮೆನಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಗೌಡ ಕಿರಿಯಾಡಿ ರವರಿಗೆ ಆಡಳಿತ ಸಮಿತಿ ಹಾಗೂ ಜೆ.ಎಮ್.ಜೆ, ಎಸ್.ವೈ.ಎಸ್ ,ಎಸ್.ಎಸ್.ಎಫ್, ಖಿದ್ಮತ್ ಗ್ರೂಪ್ ವತಿಯಿಂದ ಶಾಲು ಹೊದಿಸಿ ಗೌರವಾರ್ಪಿಸಲಾಯಿತು.


ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಾಚಾರ್ ಪವರ್ಮೆನನ್ನು ಪರಿಚಯಿಸಿ ಅವರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸದರ್ ಉಸ್ತಾದರಾದ ಸಿದ್ದೀಕ್ ಝೈನಿ, ಜಮಾಅತ್ ಗೌರವಾಧ್ಯಕ್ಷ ಹಂಝ ಬಿ.ಎ, ಕೋಶಾಧಿಕಾರಿ ಹಸೈನಾರ್ ಟೈಲ್ಸ್, ಅಕ್ಬರ್ ಅಲಿ ಬಂಡಸಾಲೆ, ಹಸೈನಾರ್ ಹೆಚ್.ಕೆ.ಜಿ.ಎನ್, ಎಸ್.ವೈ.ಎಸ್ ಅಧ್ಯಕ್ಷರು ಸಲೀಂ ಅಂಗಡಿ,ಪ್ರಧಾನ ಕಾರ್ಯದರ್ಶಿ ಕಬೀರ್ ಮಿಸ್ಬಾಹಿ ,ಖಿದ್ಮತ್ ಗ್ರೂಪ್ ಅಧ್ಯಕ್ಷ ಆರೀಫ್ ಮಾಚಾರ್ , ರಝಾಕ್ ಚೆಕ್ಕದಡಿ, ಅಬ್ದುಲ್ ಹಮೀದ್ ಅಂಗಡಿ, ಆದಮ್ ಆಟೋ, ಹಕೀಮ್ ಕುದುರು, SSF ಅಧ್ಯಕ್ಷ ಸಿದ್ದೀಕ್ ಚೆಕ್ಕದಡಿ ,ಪ್ರಧಾನ ಕಾರ್ಯದರ್ಶಿ ನೌಶಾದ್ ಉಪಸ್ಥಿತರಿದ್ದರು.

Related posts

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya

ಬೆಳ್ತಂಗಡಿ ಬ್ಯಾಟರಿ ಅಂಗಡಿಗೆ ಕನ್ನ ಹಾಕಿದ ಕಳ್ಳರು: ಅಂಗಡಿ ಶಟರ್ ಮುರಿದು ಒಳಹೋಗಲು ಪ್ರಯತ್ನ, ಗಾಳಿ-ಮಳೆಗೆ ಸಿಸಿ ಕ್ಯಾಮರಾ ಬಂದ್ ಮಾಡಿದ್ದರಿಂದ ಕಳ್ಳರ ಚಹರೆ ಪತ್ತೆಯಾಗಿಲ್ಲ.

Suddi Udaya

ನಡ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿಯಿಂದ ದಿ. ಕೆ ವಸಂತ ಬಂಗೇರರಿಗೆ ನುಡಿನಮನ

Suddi Udaya

ಎಳನೀರಿನಲ್ಲಿ ಮೊಟ್ಟಮೊದಲ ಸಾಹಿತ್ಯ ಕಾರ್ಯಕ್ರಮ: ಸಾಹಿತ್ಯ ಮತ್ತು ಬದುಕು ವಿಷಯದ ಕುರಿತು ಕಾರ್ಯಕ್ರಮ

Suddi Udaya

ನಿಡ್ಲೆ , ಬೂಡುಜಾಲು ಗ್ರಾಮಸ್ಥರಿಂದ ರಸ್ತೆ ದುರಸ್ತಿ

Suddi Udaya

ಮೇ 31 : ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ನಿವೃತ್ತಿ

Suddi Udaya
error: Content is protected !!