September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ.2: ಟೀಮ್ ದುರ್ಗಾನುಗ್ರಹ ಮುಗೇರಡ್ಕ, ನಮೋ ಬ್ರಿಗೇಡ್ ಮುಗೇರಡ್ಕ ಹಾಗೂ ಕಬಡ್ಡಿ ಅಸೊಸೀಯೇಶನ್ ಆಶ್ರಯದಲ್ಲಿ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ : ಆಮಂತ್ರಣ ಪತ್ರಿಕೆ ಬಿಡುಗಡೆ

ಮೊಗ್ರು : ಟೀಮ್ ದುರ್ಗಾನುಗ್ರಹ ಮುಗೇರಡ್ಕ ಮತ್ತು ನಮೋ ಬ್ರಿಗೇಡ್ ಮುಗೇರಡ್ಕ, ಮೊಗ್ರು ಹಾಗೂ ಆಮೇಚೂರ್ ಕಬಡ್ಡಿ ಅಸೊಸೀಯೇಶನ್ ಇವುಗಳ ಆಶ್ರಯದಲ್ಲಿ ಮಾ.2 ರಂದು ಹಿಂದೂ ಬಾಂಧವರಿಗೆ 62 ಕೆಜಿ ವಿಭಾಗದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಮುಕ್ತ ಲೆವೆಲ್ ಮಾದರಿಯ 8 ಜನರ ಹಗ್ಗಜಗ್ಗಾಟ ನಡೆಯಲಿದೆ. ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೋಕ್ತೇಸರರಾದ ಮನೋಹರ ಗೌಡ ಅಂತರ, ಚಂದ್ರಹಾಸ ಗೌಡ ದೇವಸ್ಯ, ಟೀಮ್ ದುರ್ಗಾನುಗ್ರಹ ಮುಗೇರಡ್ಕ ಹಾಗೂ ನಮೋ ಬ್ರಿಗೇಡ್ ಮುಗೇರಡ್ಕ ಇದರ ಪದಾಧಿಕಾರಿಗಳಾದ ಹಿರಿಯರಾದ ರಾಮಣ್ಣ ಗೌಡ ಎರ್ಮಲ, ಅಧ್ಯಕ್ಷರಾದ ಪ್ರಶಾಂತ್ ಎರ್ಮಲ, ಸಂಚಾಲಕರಾದ ಬಾಲಕೃಷ್ಣ ಗೌಡ ಹಾಗೂ ರಮೇಶ್ ನೆಕ್ಕರಾಜೆ, ಕಾರ್ಯದರ್ಶಿ ವರುಣ್ ನೆಕ್ಕರಾಜೆ, ಉಪಾಧ್ಯಕ್ಷರಾದ ಜಗದೀಶ್ ಅರ್ಬಿ, ಕೋಶಾಧಿಕಾರಿ ನಿತಿನ್ ಗೌಡ ಮುಂಡಾಜೆ ಸದಸ್ಯರಾದ ಸಚಿನ್ ಕಡಮ್ಮಜೆ, ಪುರಂದರ ನೈಮಾರು, ಸುಧರ್ಶನ್ ಅಲೆಕ್ಕಿ, ಯೋಗೀಶ್ ಪರಾರಿ,ತ್ರಿಶಾಂಕ್ ಪರಕ್ಕಾಜೆ, ತ್ರಿಲೋಕ್ ಪರಕ್ಕಾಜೆ.ಇವರು ಉಪಸ್ಥಿತರಿದ್ದರು.

Related posts

ಬಜಿರೆ: ಬಾಡಾರು ನಿವಾಸಿ ಶ್ರೀಮತಿ ಪ್ರೇಮ ಜೈನ್ ನಿಧನ

Suddi Udaya

ಉಜಿರೆ ಶ್ರೀ ಧ.ಮಂಜುನಾಥೇಶ್ವರ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ನೆರಿಯಾ ಗ್ರಾಮದಲ್ಲಿ “ಮಲೆಕುಡಿಯ ಬುಡಕಟ್ಟು ಕುಟುಂಬಗಳೊಂದಿಗೆ ಶೈಕ್ಷಣಿಕ ವಿನಿಮಯ”

Suddi Udaya

ನೆರಿಯ: ಬೆಂಕಿ ತಗುಲಿ ಹಾನಿಯಾದ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಮೇಲಂತಬೆಟ್ಟು ಕಲ್ಲಿನ‌ ಕೋರೆ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ; ಜು.8 ಮಾರಿಗುಡಿ ಕ್ಷೇತ್ರದಲ್ಲಿ ಪ್ರಮಾಣ; ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹೇಳಿಕೆ

Suddi Udaya

ಲಾಯಿಲ : ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಿಲಿ ನಲಿಕೆ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!