23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಇಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಮಂಜೊಟ್ಟಿ ಹೋಲಿ ಕ್ರಾಸ್ ಚರ್ಚ್ ಇಲ್ಲಿಯ ಫಾ! ಪ್ರವೀಣ್ ಡಿ’ಸೋಜಾ ನೆರೆವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಂಕರಿಸಿದ್ದ ಶಾಲಾ ಆಡಳಿತ ಟ್ರಸ್ಟಿನ ಅಧ್ಯಕ್ಷ ಜನಾಬ್ ಸೈಯದ್ ಹಬೀಬ್ ಮಾತನಾಡಿ ಸಮಾಜದಲ್ಲಿ ನಡೆಯುವ ಅನ್ಯಾಯ ಅಸಮಾನತೆಯನ್ನು ಕಿತ್ತೊಗೆಯುವಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಹಾಗೂ ಭಾರತೀಯರಾದ ನಾವು ಒಂದೇ ತಾಯಿಯ ಮಕ್ಕಳಂತೆ ಬದುಕು ನಡೆಸಬೇಕು ಎಂದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸೈಯದ್ ಆಯ್ಯುಬ್, ಕೋಶಾಧಿಕಾರಿ ಸೈಯದ್ ಇರ್ಫಾನ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್, ಶಾಲಾ ಅರೇಬಿಕ್ ಶಿಕ್ಷಣ ವಿಭಾಗದ ಮುಖ್ಯ ಗುರುಗಳಾದ ಅಬ್ದುಲ್ ರಝಾಕ್ ಇಮ್ದಾದಿ, ಅರೇಬಿಕ್ ಶಿಕ್ಷಣದ ಗುರುಗಳಾದ ಯಾಕೂಬ್ ಮದನಿ, ಆಡಳಿತ ಮಂಡಳಿಯ ಸದಸ್ಯ ಶೇಖ್ ಅಬ್ದುಲ್ ಗಫೂರ್, ಸ್ಥಳೀಯರಾದ ಮುನಿರಾಜ ಅಜ್ರಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಬಹಳ ಸುಂದರವಾದ ಪಥ ಸಂಚಲನ ಕಾರ್ಯಕ್ರಮವನ್ನು ನೆರವೇರಿಸಿದರು. ಶಾಲೆಯ ಪುಟಾಣಿ ಮಕ್ಕಳಿಂದ ನಡೆದ ಭಾರತೀಯ ಘನತೆಯನ್ನು ಸಾರುವ ವಿವಿಧ ಘಟನಾವಳಿಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳ ಪೋಷಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ವಿದ್ಯಾರ್ಥಿಗಳಾದ ಹುಸ್ನಾ ಬೇಗಂ ಕಾರ್ಯಕ್ರಮವನ್ನು ನಿರೂಪಿಸಿದರು. ಮೊಹಮ್ಮದ್ ಝಿಶಾನ್ ಸ್ವಾಗತಿಸಿದರು. ಫಿದಾ ಧನ್ಯವಾದ ನೆರವೇರಿಸಿದರು

Related posts

ನಗರ ಪಂಚಾಯತದ ಒಳಚರಂಡಿಗೆ ಬಿದ್ದ ದನ: ಅಗ್ನಿಶಾಮಕದವರ ಸಹಕಾರದಿಂದ ಮೇಲಕ್ಕೆ

Suddi Udaya

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಧರ್ಮಸ್ಥಳ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ: ತೋರಣ ಮುಹೂರ್ತ

Suddi Udaya

ಮಚ್ಚಿನ ಹಿಂದೂ ರುದ್ರಭೂಮಿಗೆ ವಿದ್ಯುತ್ ಸಂಪರ್ಕ ಅಳವಡಿಕೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಉಪಾಧ್ಯಕ್ಷ, ಯುವ ಉದ್ಯಮಿ ಶೀತಲ್ ಜೈನ್ ರವರಿಗೆ ಉದ್ಯಮ ರತ್ನ ಪ್ರಶಸ್ತಿ: ಜೆಸಿಐ ಬೆಳ್ತಂಗಡಿ ಘಟಕಾಧ್ಯಕ್ಷ ಶಂಕರ್ ರಾವ್ ರವರಿಗೆ ಶೈನಿಂಗ್ ಸೂಪರ್ ಸ್ಟಾರ್ ಪ್ರೆಸಿಡೆಂಟ್ ಪ್ರಶಸ್ತಿ

Suddi Udaya

ನಿರಂಜನ ಬಾವಂತಬೆಟ್ಟುರವರಿಗೆ ನುಡಿನಮನ

Suddi Udaya
error: Content is protected !!