32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಿರಿಯರ ಆಶಯವನ್ನು ಎತ್ತಿ ಹಿಡಿಯಲು ಸ್ವಾತಂತ್ರೋತ್ಸವ ಪ್ರೇರಣೆಯಾಗಲಿ : ಬಿ.ಎಂ.ಭಟ್

ಪಟ್ರಮೆ: ತಾವು ಹೊತ್ತ ಕನಸಿನ ಸ್ವತಂತ್ರ ಭಾರತದ ಸ್ಥಾಪನೆಗೆ ಬೇಕಾಗಿ ಅದೆಷ್ಟೋ ತ್ಯಾಗ ಬಲಿದಾನಗಳ ಮೂಲಕ ಹೋರಾಡಿದ ಹಿರಿಯ ಮಹಾತ್ಮರೆಲ್ಲರ ನೆನೆಯುವ ದಿನ ಮತ್ತು ಅವರು ನಡೆದ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವ ದಿನವೇ ಸ್ವಾತಂತ್ರೋತ್ಸವ ಎಂದು ಸಿಐಟಿಯು ನಾಯಕ ಬಿ.ಎಂ.ಭಟ್ ಹೇಳಿದರು.

ಅವರು ಪಟ್ರಮೆಯ ಜುಮ್ಮಾ ಮಸೀದಿಯಲ್ಲಿ ನಡೆದ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣಗೈದು ಮಾತಾಡುತ್ತಿದ್ದರು.

ನಮ್ಮ ಬದುಕಿನ ಮೇಲೆ ಕಾಳಜಿ ಹೊಂದಿ ಪ್ರಜಾಪ್ರಭುತ್ವ ವ್ಯವಸ್ಥೆ ತಂದು ಕೊಟ್ಟದ್ದನ್ನು ಅನುಭವಿಸಿದರೆ ಸಾಲದು, ಆ ಬದುಕನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಮಹಮ್ಮದ್ ಹನೀಫ್, ಕಾರ್ಯದರ್ಶಿ ಅನ್ಸಪ್, ಖಜಾಂಜಿ ಎನ್.ಎಸ್.ನಾಸಿರ್, ಮಹಮ್ಮದ್ ಪಿ, ಸಿಐಟಿಯು ಮುಖಂಡರಾದ ಧನಂಜಯ ಗೌಡ, ಸಿಪಿಐಎಂ ಮುಖಂಡರೂ ಮಾಜಿ ಪಂಚಾಯತು ಸದಸ್ಯರೂ ಆದ ಮಹಮ್ಮದ್ ಅನಸ್, ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರಗೀತೆ ಹಾಡಿದ ಬಳಿಕ ಮದರಸದ ಪುಟ್ಟ ವಿದ್ಯಾರ್ಥಿಗಳು ಸಾರೇ ಜಹಾಂಸೆ ಅಚ್ಚಾ ಹಾಡು ಹಾಡಿ ಗಮನ ಸೆಳೆದರು. ಮಸೀದಿಯ ಆವರಣ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು.

ಮಸೀದಿಯ ಗುರುಗಳಾದ ತಮೀಮ್ ಅನ್ಸಾರಿ ಕುಂಡಾಜೆ(ಖತೀಬರು ಪಟ್ರಮೆ) ಸ್ವಾಗತಿಸಿ, ವಂದಿಸಿದರು.

Related posts

ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಪ್ರಮುಖರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಚುನಾವಣಾ ಪ್ರಚಾರ

Suddi Udaya

ನಡ ಶಾಲೆಯ ಶತಮಾನೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

Suddi Udaya

ಶಿಬಾಜೆ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವೃತಾಚರಣೆ

Suddi Udaya

ಸೌತಡ್ಕದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ

Suddi Udaya

ವೇಣೂರು ದೇವಾಡಿಗರ ಸೇವಾ ವೇದಿಕೆಯಿಂದ ಪ್ರತಿಭಾ ಪುರಸ್ಕಾರ ಹಾಗೂ ಖಾಯಂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿಂಶತಿ ಸಂಭ್ರಮ ಹಾಗೂ ಕಾಲೇಜಿನ ವಾರ್ಷಿಕೋತ್ಸವ

Suddi Udaya
error: Content is protected !!