September 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಆ.24: ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

ಬೆಳ್ತಂಗಡಿ: ನಾಡಿನ ಪ್ರಸಿದ್ದ ಮತ್ತು ಶುದ್ದತೆಗೆ ಹೆಸರುವಾಸಿದ ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ ಆ.24 ರಂದು ಮಧ್ಯಾಹ್ನ 2.00 ಕ್ಕೆ ನಡೆಯಲಿದೆ.

ಸ್ಪರ್ಧೆಯಲ್ಲಿ ಮುದ್ದು ಕೃಷ್ಣ 0-3 ವರ್ಷ, ಬಾಲ ಕೃಷ್ಣ 4-7 ವರ್ಷ, ರಾಧಾ ಕೃಷ್ಣ 8-12 ವರ್ಷದ ಮಕ್ಕಳಿಗೆ ಮಾತ್ರ ಅವಕಾಶ. ಸ್ಪರ್ಧಾ ನೋಂದಾವಣೆಗೆ ಆಗಸ್ಟ್ 22 ಕೊನೆಯ ದಿನಾಂಕವಾಗಿದೆ.

ಸ್ಪರ್ಧೆಯ ನಿಬಂಧನೆಗಳು: ಬೆಳ್ತಂಗಡಿ ತಾಲೂಕಿನವರಿಗೆ ಮಾತ್ರ ಅವಕಾಶ. ಸ್ಪರ್ಧಾಳುಗಳು ಸಮಯಕ್ಕೆ ಸರಿಯಾಗಿ ಹಾಜಾರಿರಬೇಕು. ನೋಂದಾವಣೆ ಸಮಯ ಆಧಾರ್ ಕಾರ್ಡ್ ಕಡ್ಡಾಯ. ಪ್ರತೀ ವಿಭಾಗದಲ್ಲೂ ಸ್ಪರ್ಧಿಗಳಿಗೆ 1-2 ನಿಮಿಷದ ಸಮಯಾವಕಾಶ ನೀಡಲಾಗುವುದು. ಸ್ಪರ್ಧೆಗೆ ಬೇಕಾದ ವೇಷಭೂಷಣ ಮತ್ತು ಹಾಡನ್ನು ತಾವೇ ತಯಾರಿ ಮಾಡಿಕೊಂಡು ಬರತಕ್ಕದ್ದು. ವೇಷಭೂಷಣ, ಹಾವ-ಭಾವಗಳನ್ನು ತೀರ್ಪುಗಾರಿಕೆಗೆ ಪರಿಗಣಿಸಲಾಗುವುದು. ಸಂಘಟಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಎಲ್ಲಾ ಸ್ಪರ್ಧಿಗಳ ಫೋಟೊ/ ವೀಡಿಯೋವನ್ನು ಮುಳಿಯ ಫೇಸ್‌ಬುಕ್ ಪೇಜ್ ನಲ್ಲಿ ಹಾಕಲಾಗುವುದು.

ನೋಂದಾವಣೆಗಾಗಿ – 9343004916 / 87925 30916

Related posts

ಪ್ರಕೃತಿಯ ವಿಸ್ಮಯ: ತೊತಪುರಿ ಮಾವಿನ ಕಾಯಿಯಂತೆ ಕಂಡು ಬಂದ ಪಪ್ಪಾಯಿ ಹಣ್ಣು

Suddi Udaya

ನಿಡ್ಲೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶ್ರಮದಾನ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಅಂಡಿಂಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ನಿರ್ಗಮಿತ ಟ್ರಸ್ಟಿಗಳಿಗೆ ಬೀಳ್ಕೊಡುಗೆ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ: ಹಸಿರು ವಾಣಿ ಮತ್ತು ಪುಷ್ಪಗನ್ನಡಿ ಸಮರ್ಪಣೆ

Suddi Udaya

ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷ ಆನಂದ ಅಡಿಲು ರವರಿಗೆ ಸನ್ಮಾನ ಮತ್ತು ಪಿಡಿಒ ಸವಿತಾ ರವರಿಗೆ ಬೀಳ್ಕೊಡುಗೆ

Suddi Udaya
error: Content is protected !!