24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆ.17: ಬೆಳ್ತಂಗಡಿ ಲಯನ್ಸ್‌ ಕ್ಲಬ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಬೆಳ್ತಂಗಡಿ : ಲಯನ್ಸ್‌ ಕ್ಲಬ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಶ್ರೀ ಸ್ಟಾರ್ ಯುವಕ ಮಂಡಲ (ರಿ.) ಪಣೆಜಾಲು, ಶ್ರೀ ಸ್ಟಾರ್ ಮಹಿಳಾ ಮ೦ಡಲ (ರಿ.) ಪಣೆಜಾಲು, ಶ್ರೀ ಸ್ಟಾರ್ ಶಟಲ್ ಬ್ಯಾಡ್ಮಿಂಟನ್ ಫೌಂಡೇಶನ್ ಇವರ ಸಹಯೋಗದಲ್ಲಿ 32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಲಯನ್ಸ್ ಕಪ್-2024 ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟವು ಆ.17 ರಂದು ಸಂಜೆ ಗಂಟೆ 6-00ಕ್ಕೆ ಪಣೆಜಾಲು ಲಯನ್ಸ್‌ ಒಳಾ೦ಗಣ ಕ್ರೀಡಾ೦ಗಣದಲ್ಲಿ ನಡೆಯಲಿದೆ.

ಪಂದ್ಯಾಟದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ದೇವದಾಸ್ ಶೆಟ್ಟಿ ಹಿಬರೋಡಿ ನಡೆಸಿಕೊಡಲಿದ್ದಾರೆ. ನಲವತ್ತು ವಯಸ್ಸು ಮೇಲಿನ ಮತ್ತು ಕೆಳಗಡೆ ಈ ಎರಡು ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ ಜನರಿಗೆ ಮಾತ್ರ ಅವಕಾಶವಿದ್ದು ಹೆಚ್ಚಿನ ಕ್ರೀಡಾ ಅಭಿಮಾನಿಗಳು ಇದರ ಅವಕಾಶ ಪಡೆದುಕೊಳ್ಳಬೇಕೆಂದು ಸಂಘಟಕರು ತಿಳಿಸಿದ್ದಾರೆ.

Related posts

ಉಜಿರೆ: ಮಾಚಾರು ನಿವಾಸಿ ರಿಕ್ಷಾ ಚಾಲಕ ಸುಧಾಕರ ನಾಪತ್ತೆ

Suddi Udaya

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ

Suddi Udaya

ನಾಳ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ವಿಶೇಷ ಪೂಜೆ, ರಾತ್ರಿ ಭಜನೆ, ರಂಗಪೂಜೆ

Suddi Udaya

ಮರೋಡಿ ಗ್ರಾಮಸಭೆ: ಅವಧಿ ಮೀರಿದ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ತೆರವುಗೊಳಿಸಲು ಗ್ರಾಮಸ್ಥರ ಒತ್ತಾಯ

Suddi Udaya

ಹಿರಿಯ ಯಕ್ಷಗಾನ ಭಾಗವತ ಧರ್ಣಪ್ಪ ಆಚಾರ್ಯ ಅಳದಂಗಡಿ ನಿಧನ

Suddi Udaya

ಭಾರತ್ ಬೀಡಿ ಕಂಪೆನಿ ಉಳಿಸಿ ಭಾರತ್ ಬೀಡಿ ಕಂಪೆನಿ ಎದುರು ಸಿಐಟಿಯು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ

Suddi Udaya
error: Content is protected !!