27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಪಡ್ಯಾರಬೆಟ್ಟದ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಆಟಿ ಕೋಲ

ವೇಣೂರು,: ಬೆಳ್ತಂಗಡಿ ತಾಲೂಕಿನ ಪೆರಿಂಜೆ ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಆ. 16ರಂದು ಸಿಂಹ ಸಂಕ್ರಮಣ ಹಾಗೂ ಆಟಿ ಕೋಲವು ಕ್ಷೇತ್ರದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಅವರ ಉಪಸ್ಥಿತಿಯಲ್ಲಿ ವೇ. ಮೂ. ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ಜರಗಿತು.

ಸಂಕ್ರಮಣ ಪ್ರಯುಕ್ತ ಬೆಳಿಗ್ಗೆ ಶ್ರೀ ದೈವಕ್ಕೆ ಹೂವಿನ ಪೂಜೆ ಸೇವೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಆಟಿ ತಿಂಗಳ ನಿಮಿತ್ತ ಸಂಜೆ ಕ್ಷೇತ್ರದಲ್ಲಿ ಶ್ರೀ ದೈವಕ್ಕೆ ಆಟಿಕೋಲ ಮತ್ತು ತುಲಾಭಾರ ಸೇವೆ ಜರಗಿತು.

ಶ್ರೀ ಕ್ಷೇತ್ರದ ವಿಕಾಸ್ ಜೈನ್ ಹಾಗೂ ವಿಶ್ವಾಸ್ ಜೈನ್ ಎಲ್ಲರನ್ನು ಬರಮಾಡಿಕೊಂಡರು. ಸಾಂಪ್ರದಾಯಿಕವಾಗಿ ನಡೆದ ಆಟಿ ಕೋಲದಲ್ಲಿ ಮಾಗಣೆ, ಗುತ್ತು ಬರ್ಕೆಯವರು, ಗುರಿಕಾರರು ಹಾಗೂ ನೂರಾರು ಮಂದಿ ಭಕ್ತರು ಪಾಲ್ಗೊಂಡು ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.

Related posts

ಕಡಿರುದ್ಯಾವರ ದ. ಕ. ಜಿ. ಪಂ ಹಿ. ಪ್ರಾ ಶಾಲೆಯಲ್ಲಿ ಎಸ್.ಡಿ.ಎಮ್.ಸಿ, ಪೋಷಕರ ಸಭೆ ಹಾಗೂ ಶಾಲಾ ಮಕ್ಕಳ ಸಂತೆ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವರ್ತಕರ ಸಂಘದ ವತಿಯಿಂದ ಹೂವಿನ ವ್ಯಾಪಾರಿ ಶಿವರಾಮ್ ರವರಿಗೆ ಆರ್ಥಿಕ ಸಹಾಯ

Suddi Udaya

ಉಜಿರೆಯ ಉದ್ಯಮಿ ಮೋಹನ ಮುರುಡಿತ್ತಾಯ ನಿಧನ

Suddi Udaya

ಅರಸಿನಮಕ್ಕಿ: ಅರಿಕೆಗುಡ್ಡೆ ವನದುರ್ಗ ದೇವಿ ಕ್ಷೇತ್ರದಲ್ಲಿ ನವರಾತ್ರಿ ಪೂರ್ವಭಾವಿ ಸಭೆ

Suddi Udaya

ಜ.14-23: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ತೋಟತ್ತಾಡಿ: ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅನಿಲ್ ಕಕ್ಕಿಂಜೆ

Suddi Udaya
error: Content is protected !!