ಬೆಳ್ತಂಗಡಿ: ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ‘ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿ ಡೆಲ್ಲಿ ‘(IIT DELHI) ಯಲ್ಲಿ ಅಜಿತ್ ಕುಮಾರ್ ರವರು ಮಾಸ್ಟರ್ ಆಫ್ ಡಿಸೈನ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಇವರು 2015ರಲ್ಲಿ ಡಿಪ್ಲೋಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಎಸ್.ಡಿ.ಎಮ್ ಪಾಲಿಟೆಕ್ನಿಕ್ ಉಜಿರೆ ಯಲ್ಲಿ ಪಡೆದು, 2018ರಲ್ಲಿ ಬ್ಯಾಚುಲರ್ ಆಪ್ ಮೆಕಾನಿಕಲ್ ಇಂಜಿನಿಯರಿಂಗ್ (BE) ಪದವಿಯನ್ನು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಡೆದಿರುತ್ತಾರೆ. ನಂತರ ನಾಲ್ಕು ವರ್ಷಗಳ ಕಾಲ ಬೊರೋಸಿಲ್ ಡಿಸೈನ್ ಇಂಡಸ್ಟ್ರಿಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಇಂಡೋ ಎಐ ಸಂಸ್ಥೆ ದೆಹಲಿ ಯಲ್ಲಿ ಡಿಸೈನ್ ಹೆಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಡಿಸೈನ್ ವಿಭಾಗದಲ್ಲಿ ಎಕ್ಸ್ ಪ್ರೊ 201 ಅವಾರ್ಡ್ ವಾರಾಣಸಿ ಸುಬ್ರಾಯ ಭಟ್ ಅವಾರ್ಡ್, ಮತ್ತು ಪ್ರೊಡೆಕ್ಟ್ ಇಂಜಿನಿಯರಿಂಗ್ ಅವಾರ್ಡ್ ನ್ನು ಪಡೆದಿರುತ್ತಾರೆ.
ಇವರು ತೆಂಕಕಾರಂದೂರು ಗ್ರಾಮದ ಕಂಬ್ಲಾಜೆಯ ಶ್ರೀಮತಿ ಭಾರತಿ ಮತ್ತು ದಯಾನಂದ ಪೂಜಾರಿಯವರ ಪುತ್ರ .