September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆ

ನಾರಾವಿ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆಯ ಸಭೆಯು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಆ.18 ರಂದು ನಡೆಯಿತು.

ಮೇಲ್ವಿಚಾರಕರಾದ ದಮಯಂತಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ವಲಯದಲ್ಲಿ ಒಟ್ಟು 15 ಭಜನಾ ಮಂಡಳಿಗಳಿದ್ದು ಇದರಲ್ಲಿ ಒಬ್ಬರು ಸಂಚಾಲಕರು ಹಾಗೂ 5 ಮಂದಿ ಪದಾಧಿಕಾರಿಗಳ ಅಯ್ಕೆ ಮಾಡುವ ಬಗ್ಗೆ ತಿಳಿಸಿದರು. ನಂತರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಸಂತೋಷ್ ಮರ್ದೋಟ್ಟು, ಅಧ್ಯಕ್ಷರಾಗಿ ರಾಜು ಪೂಜಾರಿ, ಉಪಾಧ್ಯಕ್ಷರಾಗಿ ಸುಧಾಕರ, ಕಾರ್ಯದರ್ಶಿ ಹರೀಶ್ ಯನ್, ಜತೆ ಕಾರ್ಯದರ್ಶಿ ಅಕ್ಷಯ್, ಕೋಶಾಧಿಕಾರಿಯಾಗಿ ಚಂದ್ರ ಶೇಖರ ರಾವ್ , ಹಾಗೂ ಯೋಗೀಶ್ ಆಚಾರ್ಯ, ಇವರನ್ನು ಭಜನಾ ಮಂಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು. ನಾರಾವಿ ಸೇವಾ ಪ್ರತಿನಿಧಿ ರೇಷ್ಮಾ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಹರಿಣಾಕ್ಷಿ ಸ್ವಾಗತಿಸಿದರು. ಸಭೆಯ ಕೊನೆಗೆ ಕೊಕ್ರಾಡಿ ಸಾವ್ಯ ಸೇವಾಪ್ರತಿನಿಧಿ ಶಶಿಧರ್ ಕುಲಾಲ್ ಧನ್ಯವಾದವಿತ್ತರು.

Related posts

ಭಾರೀ ಮಳೆ: ಕಿಲ್ಲೂರು ರಸ್ತೆಗೆ ನುಗ್ಗಿದ ನೆರೆ ನೀರು

Suddi Udaya

ಚಾರ್ಮಾಡಿ: ರಸ್ತೆ ಬದಿ ಅರಣ್ಯಕ್ಕೆ ಮಗುಚಿ ಬಿದ್ದ ಐಸ್ ಕ್ರೀಂ ಸಾಗಾಟದ ವಾಹನ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ ಸಮರ್ಪಣೆ

Suddi Udaya

ಬೆಳ್ತಂಗಡಿ : ತಡೆಗೋಡೆ ಏಕಾಏಕಿ ಕುಸಿದು ಬಿದ್ದು ಓರ್ವ ಸಾವು

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ” ಗಣಪತಿ ಎನ್ನ ಪಾಲಿಸೋ..” ಭಕ್ತಿಗೀತೆ ಬಿಡುಗಡೆ

Suddi Udaya

ಕುತ್ಲೂರು ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya
error: Content is protected !!