September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಮೂಲಭೂತ ಸೌಕರ್ಯ ವಂಚಿತ ಪುಳಿತ್ತಡಿ, ಎರ್ಮಲೆ ಪ್ರದೇಶ ಆದಿವಾಸಿ ಕುಟುಂಬಗಳಿಂದ ನೋಟಾ ಅಭಿಯಾನಕ್ಕೆ ನಿರ್ಧಾರ

ನಾವೂರು: ನಾವೂರು ಗ್ರಾಮದ ಪುಳಿತ್ತಡಿ, ಕುದ್ರೋಳಿ ಪ್ರದೇಶದ ಮೂಲನಿವಾಸಿ ಮಲೆಕುಡಿಯ ಸಮುದಾಯದವರು ತಮ್ಮ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂಬ ಬೇಡಿಕೆಯನ್ನು ಮುಂದಿಟ್ಟು ಈ ಬಾರಿಯ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ನಿರ್ಧರಿಸಿ, ತಮ್ಮ ಪ್ರದೇಶದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.


ಈ ಪರಿಸರದಲ್ಲಿ 22 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬದವರಿದ್ದಾರೆ. ಸುಮಾರು ೧೦೦ಮಂದಿ ಮತದಾರರಿದ್ದಾರೆ. ದಶಕಗಳಿಂದ ಈ ಜನರು ತಮ್ಮ ಪ್ರದೇಶಕ್ಕೆ ರಸ್ತೆ ಹಾ ಗೂ ವಿದ್ಯುತ್ ಸಂಪರ್ಕ ಒದಗಿಸುವಂತೆ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಕುದುರೇಮುಖ ರಾಷ್ಟ್ರೀಯ ಉದ್ಯಾನವದ ಒಳಗಿರುವ ಈ ಕುಟುಂಬಗಳಿಗೆ ಇನ್ನೂ ಯಾವುದೇ ಮೂಲಭೂತ ಸೌಲಭ್ಯಗಳು ಲಭಿಸಿಲ್ಲ. ತಮ್ಮ ಬೇಡಿಕೆಗಳ ಬಗ್ಗೆ ಗ್ರಾಮ ಪಂಚಾಯತಿನಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.


ಇದರಿಂದ ಬೇಸತ್ತ ನಾವೂರು ಗ್ರಾಮದ ಅಲ್ಯ, ಪುಳಿತ್ತಡಿ, ಎರ್ಮಲೆ ಮಂಜಲ,ಕುದ್ರೋಳಿ, ಕಾಸರೋಳಿ ಪರಿಸರದ ಆದಿವಾಸಿ ಕುಟುಂಬಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತವನ್ನು ಚಲಾಯಿಸುವುದಾಗಿ ಬ್ಯಾನರ್ ಅಳವಡಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

Related posts

ಕರಾಟೆ ಸ್ಪರ್ಧೆ: ಸಾನ್ವಿ ಎಸ್ ಕೋಟ್ಯಾನ್ ಬಳಂಜ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಸೋಮಂತಡ್ಕ: ಸೂಪರ್ ಮಾರ್ಕೆಟ್ ಗೆ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ

Suddi Udaya

ಫೆ.15: ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಹೊರಾಂಗಣಕ್ಕೆ ನಾರಾವಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ರೂ.9 ಲಕ್ಷ ವೆಚ್ಚದಲ್ಲಿ ಹಾಸುಕಲ್ಲು ಸಮರ್ಪಣೆ

Suddi Udaya

ನಿಡ್ಲೆ ಗ್ರಾ.ಪಂ. ನಿಂದ ರಸ್ತೆ ಬದಿಯಲ್ಲಿರುವ ಗೂಡಂಗಡಿಗಳಿಗೆ ದಿಢೀರ್ ಭೇಟಿ: ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್‌ ವಶಕ್ಕೆ

Suddi Udaya

ಉಜಿರೆ: ಶ್ರೀ.ಧ.ಮಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲಾ ವಾರ್ಷಿಕೋತ್ಸವ

Suddi Udaya

ಉಜಿರೆ ಬೆನಕ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

Suddi Udaya
error: Content is protected !!