ಬಳಂಜ: ಬಳಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಶ್ರೀಮತಿ ಪುಷ್ಪಾರವರ ಅಧ್ಯಕ್ಷತೆಯಲ್ಲಿ ಆ.17 ರಂದು ಭಾಗಿ ಮುಂಡಪ್ಪ ಪೂಜಾರಿ ಸಭಾ ವೇದಿಕೆಯಲ್ಲಿ ಜರುಗಿತು.
ಸಂಘವು ರೂ.6.74 ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ.65 ಬೋನಸ್ ಹಾಗೂ ಶೇ.20 ಡಿವಿಡೆಂಟ್ ನೀಡಲಾಗುವುದು.
ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ. ಸತೀಶ್ ರಾವ್ ಹಾಗೂ ವಿಸ್ತರಣಾಧಿಕಾರಿ ಸುಚಿತ್ರಾ ರವರು ಸಭೆಯಲ್ಲಿ ಸದಸ್ಯರಿಗೆ ಹೈನುಗಾರಿಕಾ ಮಾಹಿತಿಯನ್ನು ನೀಡಿದರು. ಉಪಾಧ್ಯಕ್ಷೆ ಮಾಲಿನಿ , ಶಾಂಭವಿ, ಅರುಣಾ ನಿರುಪಮಾ, ಉಷಾ, ಜಯಂತಿ, ಶೋಭಾ, ಯಶೋಧಾ, ಬೇಬಿ, ಉಪಸ್ಥಿತರಿದ್ದರು.
ಮುಖ್ಯ ನಿರ್ವಹಣಾಧಿಕಾರಿ ಭಾರತಿ ವರದಿ ಮತ್ತು ಲೆಕ್ಕ ಪತ್ರಗಳನ್ನು ಮಂಡಿಸಿದರು. ಸಂಘದ ಹಿರಿಯ ಹೈನುಗಾರರು , ನಿರ್ದೇಶಕರು ಆದ ಯಶೋದ ರವರನ್ನು ಸನ್ಮಾನಿಸಲಾಯಿತು. ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿ ಪ್ರಥಮ ಸ್ಥಾನ ಪಡೆದ ಪ್ರಮೀಳಾ, ದ್ವಿತೀಯ ನಂದಿನಿ, ತೃತೀಯ ಮಾಲಿನಿ ಹಾಗೂ 9 ಜನ ಅತೀ ಹೆಚ್ಚು ಹಾಕಿದ ಗುಣವತಿ , ಮುಕ್ತಾ, ಅರುಣ ಹೆಗ್ಡೆ, ಹರ್ಷಿಣಿ, ಸುಖಾರೈ, ಜಯಶ್ರೀ, ಪುಷ್ಪಾ, ಹರ್ಷಲತಾ, ಉಷಾ ಇವರನ್ನು ಸಭೆಯಲ್ಲಿ ಗುರುತಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮನ್ವಿತಾ ಹಾಗೂ ರಕ್ಷಿತ್ ಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ನಿರ್ದೇಶಕರಾದ ನಿರುಪಮಾ ಸ್ವಾಗತಿಸಿ, ಸದಸ್ಯೆ ನಂದಿನಿ ನಿರೂಪಿಸಿದರು. ಉಪಾಧ್ಯಕ್ಷೆ ಮಾಲಿನಿ ವಂದಿಸಿದರು. ಸಭೆಯಲ್ಲಿ ಸಂಘಕ್ಕೆ ಸ್ಥಳ ದಾನ ,ಮಾಡಿದಂತಹ ಹೆಚ್. ಧರ್ಣಪ್ಪ ಪೂಜಾರಿ ಯವರು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಸುರೇಶ್ ಪೂಜಾರಿ ಜೈಮಾತಾ ಹಾಗೂ ರೇಶ್ಮಾ ಸಹಕರಿಸಿದರು.