April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ವಲಯ ಪ್ರಗತಿ ಬಂಧು ಒಕ್ಕೂಟ ಜನಜಾಗೃತಿ ಗ್ರಾಮ ಸಮಿತಿ ಪದಗ್ರಹಣ ಸಮಾರಂಭ

ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಅಳದಂಗಡಿ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕುದ್ಯಾಡಿ ಜನಜಾಗೃತಿ ಗ್ರಾಮ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪದಗ್ರಹಣ ಸಮಾರಂಭವು ಕುದ್ಯಾಡಿ ಶಾಲಾ ವಠಾರದಲ್ಲಿ ಆ. 18 ರಂದು ಜರಗಿತು.


ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ವಿಶ್ವನಾಥ ಪೂಜಾರಿ ಕುದ್ಯಾಡಿ ಗುತ್ತು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಭೆಯ ಅಧ್ಯಕ್ಷರಾದ ಶ್ರೀಮತಿ ತಾರಾ, ಅಳದಂಗಡಿ ಯೋಜನಾ ಮೇಲ್ವಿಚಾರಕರು ಸುಮಂಗಲ., ಸದ್ಧರ್ಮ ಯುವಕ ಮಂಡಲ ಅಧ್ಯಕ್ಷ ಸದಾನಂದ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಯಶೋಧ ಎಲ್ ಬಂಗೇರ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಂತಿ ಸಿ ಪೂಜಾರಿ, ನವ ಜೀವನ ಸಮಿತಿ ಅಧ್ಯಕ್ಷರಾದ ಪ್ರವೀಣ್ ಪೂಜಾರಿ, ಒಕ್ಕೂಟದ ಉಪಾಧ್ಯಕ್ಷ ರಾಮಪ್ಪ ಕುಲೆಚ್ಚಾವು, ಒಕ್ಕೂಟ ಕಾರ್ಯದರ್ಶಿಯಾದ ಪೂರ್ಣಿಮಾ, ಜೊತೆ ಕಾರ್ಯದರ್ಶಿಗಳಾದ ಜನಿತ ಶೆಟ್ಟಿ ಉಪಸ್ಥಿತರಿದ್ದರು.


ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರು ಪದಾಧಿಕಾರಿಗಳಿಗೆ ಪುಸ್ತಕ ಹಸ್ತಾಂತರ ಮಾಡಲಾಯಿತು.
ಕುದ್ಯಾಡಿ ಒಕ್ಕೂಟದಲ್ಲಿ ಪ್ರಾರಂಭಿಸುವಾಗ ಇರುವಂತ ನಾಲ್ಕು ಮಂದಿ ಹಿರಿಯರನ್ನು ಗೌರವಿಸಲಾಯಿತು.
ಮೂರು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಇಬ್ಬರು ನವಜೀವನ ಸಮಿತಿಯ ಫಲಾನುಭವಿಗಳನ್ನು ಸನ್ಮಾನಿಸಲಾಯಿತು.
ಪೂರ್ಣಿಮಾ ದರ್ಕಾಸು ಪ್ರಾರ್ಥನೆ ಮಾಡಿದರು. ಸೇವಾ ಪ್ರತಿನಿಧಿಯಾದ ಮಮತಾ ಶುಭಕರ ಪೂಜಾರಿ ವರದಿ ವಾಚಿಸಿದರು. ಶುಭಾಕರ ಪೂಜಾರಿ ಸ್ವಾಗತಿಸಿದರು. ದಿನೇಶ್ ಬಿರ್ಮಜರಿ ಧನ್ಯವಾದವಿತ್ತರು.

Related posts

ಲಾಯಿಲ: ಶ್ರೀ ಉಳ್ಳಾಲ್ತಿ, ಮೈಸಂದಾಯ ಹಾಗೂ ಗುಳಿಗ ದೈವಗಳ ಸಾನಿಧ್ಯ ಪಿಲಿಪಂಜರ ಕ್ಷೇತ್ರ ಇದರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರ ಸಾನಿಧ್ಯದಲ್ಲಿ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮೋತ್ಸವ

Suddi Udaya

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿ ದೇವಸ್ಥಾನದ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಕೊಯ್ಯೂರು: ಹುಟ್ಟುಹಬ್ಬ ಆಚರಣೆ ವೇಳೆ ಗೆಳೆಯರ ಹುಚ್ಚಾಟ: ಯುವಕನಿಗೆ ಬೆಂಕಿ ಹೊತ್ತಿಕೊಂಡು ಅವಘಡ

Suddi Udaya

ಬೆಳ್ತಂಗಡಿ ನ.ಪಂ. ವ್ಯಾಪ್ತಿಯ ಮಾಡ್ಯಾಲೋಟ್ಟುನಲ್ಲಿ ರಸ್ತೆಗೆ ಗುಡ್ಡ ಕುಸಿತ

Suddi Udaya
error: Content is protected !!