ದುರ್ಗದ ಬೆಟ್ಟ, ರಾಣಿ ಝರಿ, ಮೈದಾಡಿ ಬೆಟ್ಟದ ಕಡೆಯಿಂದ ಹೊಳೆಯ ನೀರಿನಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಬರುತ್ತಿರುವ ಕುರಿತು ಸ್ಥಳೀಯರಿಂದ ಮಾಹಿತಿ ಬಂದಿದೆ. ಬೆಟ್ಟಗಳ ಹಾಗೂ ನದಿಯ ಪಾತ್ರದಲ್ಲಿರುವ ಬೆಳ್ತಂಗಡಿ ತಾಲೂಕಿನ ಬಂಧುಗಳು ಜಾಗರುಕರಾಗಿರುವಂತೆ ಶಾಸಕ ಹರೀಶ್ ಪೂಂಜರು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಡಳಿತ ಹಾಗೂ ಭೂ ಶಾಸ್ತ್ರಜ್ಞರು ಈ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಸ್ತುಸ್ಥಿತಿ ಬಗ್ಗೆ ವರದಿ ನೀಡಲಿದ್ದಾರೆ. ನೀರಿನ ಮಟ್ಟ ಹಾಗೂ ಭೂ ಕುಸಿತದ ಲಕ್ಷಣ ಕಂಡರೆ ಕೂಡಲೇ ಸಮಯಾಸಮಯವೆನ್ನದೆ ನನ್ನನ್ನು, ನನ್ನ ಕಚೇರಿಯನ್ನು ಅಥವಾ ಸ್ಥಳೀಯ ಬಿಜೆಪಿ ನಾಯಕರನ್ನು ಸಂಪರ್ಕಿಸುವಂತೆ ಶಾಸಕ ಹರೀಶ್ ಪೂಂಜ ರು ತಿಳಿಸಿದ್ದಾರೆ.