ಮುಂಡಾಜೆ:ಮುಂಡಾಜೆ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ. 22 ನಡೆಯಿತು.
ಮುಂಡಾಜೆ ಆರೋಗ್ಯ ಇಲಾಖೆಗೆ ಖಾಯಂ ವೈದ್ಯಾಧಿಕಾರಿಯ ನೇಮಕವಾಗಬೇಕು. ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಕೆಲವೊಂದು ದಾಖಲೆಗೆ ಸಹಿ ಮಾಡಲು ಕೂಡ ಖಾಯಂ ವೈದ್ಯಾಧಿಕಾರಿ ಇರದಿರುವುದರಿಂದ ಸಮಸ್ಯೆ ಎದುರಾಗಿದೆ. ವೈದ್ಯಾಧಿಕಾರಿಯ ಮೊಬೈಲ್ ನಂಬರನ್ನು ಆಸ್ಪತ್ರೆಯ ಸಿಬ್ಬಂದಿಗಳು ಕೊಡುವುದಿಲ್ಲ ಯಾಕೆ? ವೈದ್ಯಾಧಿಕಾರಿ ಮೊಬೈಲ್ ನಂಬರನ್ನು ಬೋರ್ಡ್ ಮೇಲೆ ಹಾಕಬೇಕೆಂದು ನಾಮದೇವ್ ರಾವ್ ಆಗ್ರಹಿಸಿದರು.ಮಾರ್ಗದರ್ಶಿ ಅಧಿಕಾರಿಯಾಗಿ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿಯಾದ ಪ್ರತಿಮಾ ಅವರು ಗ್ರಾಮ ಸಭೆಯನ್ನು ಉತ್ತಮವಾಗಿ ನಡೆಸಿಕೊಟ್ಟರು. ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ ಎಲ್ಲರನ್ನು ಸ್ವಾಗತಿಸಿ,ಅನುಪಾಲನಾ ವರದಿ ಮತ್ತು ಜಮಾಖರ್ಚಿನ ವಿವಿರವನ್ನು ಸಭೆಯ ಮುಂದಿಟ್ಟರು.ಪಂಚಾಯತ್ ಉಪಾದ್ಯಕ್ಷೆ ಸುಮಲತಾ, ಸದಸ್ಯರಾದ ಜಗದೀಶ,ರಿಶಾ ಪಟವರ್ಧನ್,ರವಿಚ್ಚಂದ್ರ,ಅಶ್ವಿನಿ,ಎ.ರಾಮಣ್ಣ ಶೆಟ್ಟಿ, ವಿಮಲ ಎಚ್.ಎಸ್,ರಂಜಿನಿ,ವಿಶ್ವನಾಥ ಶೆಟ್ಟಿ, ಯಶೋಧ ಉಪಸ್ಥಿತರಿದ್ದರು.ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು. ಆಶಾ,ಅಂಗನವಾಡಿ ಕಾರ್ಯಕರ್ತೆಯರು,ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.