22.6 C
ಪುತ್ತೂರು, ಬೆಳ್ತಂಗಡಿ
July 23, 2026
Uncategorized

ಮಾಲಾಡಿ: ಜ್ವರದಿಂದ ಬಳಲಿ ಯುವಕ ಮೃತ್ಯು

ಮಾಲಾಡಿ: ಜ್ವರ ಹಾಗೂ ಕೆಮ್ಮುನಿಂದ ಬಳಲುತ್ತಿದ್ದ ಮಾಲಾಡಿ ಗ್ರಾಮದ ನಿವಾಸಿ ಚೇತನ್ (೨೫ವ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನ.೧೨ರಂದು ವರದಿಯಾಗಿದೆ.


ಚೇತನ್ ಅವರು ಸುಮಾರು ೧೦-೧೫ ದಿನಗಳಿಂದ ಜ್ವರ ಹಾಗೂ ಕೆಮ್ಮುವಿನಿಂದ ಬಳಲುತ್ತಿದ್ದು ಈ ಬಗ್ಗೆ ಸ್ಥಳಿಯ ವೈದ್ಯರಿಂದ ಔಷದೋಪಚಾರ ಮಾಡಿದರೂ ಕೂಡಾ ಜ್ವರ ಕಡಿಮೆಯಾಗದೇ ಇದ್ದುದರಿಂದ ನ.೧೨ ರಂದು ಮಧ್ಯಾಹ್ನ ಬಂಟ್ವಾಳ ಆಸ್ಪತ್ರೆಗೆ ಹೋಗಿ ಜೌಷಧಿ ತಂದಿದ್ದರು. ಸಂಜೆ ಸಹೋದರ ಮಿಥುನ್ ತನ್ನ ದೊಡ್ಡಪ್ಪನ ಮಕ್ಕಳಾದ ವಿವೇಕ್ ಹಾಗೂ ಅಶೋಕ್ ಕುಮಾರ್ ರವರೊಂದಿಗೆ ಮನೆ ಸಮೀಪವಿರುವ ಸರ್ವಿಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಲ್ಲಿಗೆ ಬಂದ ಚೇತನ್ ನಾನು ಬಂಟ್ವಾಳ ಆಸ್ಪತ್ರೆಯಿಂದ ಔಷಧಿ ತೆಗೆದುಕೊಂಡು ಬಂದಿದ್ದೇನೆ. ನನಗೆ ತುಂಬಾ ಸುಸ್ತು ಅಗುತ್ತಿದೆ ಎಂದು ಹೇಳುತ್ತಾ, ಒಮ್ಮೆಲೆ ವಾಂತಿ ಮಾಡಲು ಪ್ರಾರಂಭಿಸಿದ್ದು, ಕೂಡಲೇ ಅವರ ಸಹೋದರ ಮಿಥುನ್ ಹಾಗೂ ದೊಡ್ಡಪ್ಪನ ಮಕ್ಕಳು ಉಪಚರಿಸಿ ಚಿಕಿತ್ಸೆ ಬಗ್ಗೆ ಮಡಂತ್ಯಾರಿಗೆ ಕರೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಗಾಳಿ ಮಳೆ: ನಡ ಅಂತ್ರಾಯಬೈಲು ಸುಂದರ ಗೌಡ ರವರ ಮನೆಯ ಗೋಡೆ ಕುಸಿತ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುವ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ

Suddi Udaya

ಕುಪ್ಪೆಟ್ಟಿ ಸಮೀಪ ಗುಡ್ಡ ಜರಿದು ಅಪಾಯದ ಸ್ಥಿತಿ ನಿರ್ಮಾಣ

Suddi Udaya

ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಮಳೆ

Suddi Udaya

ಜೆ ಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ

Suddi Udaya

ಪಟ್ರಮೆ ‘ಸ್ಪಂದನ’ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!