September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವರ್ಗಾವಣೆ ಗೊಂಡಿರುವ ಶಿಕ್ಷಕಿ ಸುರೇಖಾ ರವರಿಗೆ ಮೈರೋಳ್ತಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ

ಬಂದಾರು : ಬಂದಾರು ಗ್ರಾಮದ ಮೈರೋಳ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಎಂಟೂವರೇ ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಕೂಕ್ರಬೆಟ್ಟು ಶಾಲೆಗೆ ವರ್ಗಾವಣೆ ಗೊಂಡಿರುವ ಶಿಕ್ಷಕಿ ಸುರೇಖಾ ಇವರಿಗೆ ಆಗಸ್ಟ್ 22 ರಂದು ಮೈರೋಳ್ತಡ್ಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಪೋಷಕ ವೃಂದ ಹಾಗೂ ಶಿಕ್ಷಕ ವೃಂದ ಸಹಕಾರದಲ್ಲಿ ಅಭಿನಂದನಾ ಕಾರ್ಯಕ್ರಮ ನೇರವೇರಿತು.


ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪಂಚಾಯತ್ ಸದಸ್ಯರಾದ ಸುಚಿತ್ರಾ ಮೂರ್ತಾಜೆ, ಪರಮೇಶ್ವರಿ ಕೆ ಗೌಡ ಪುಯಿಲ, ಪ್ರಗತಿಪರ ಕೃಷಿಕ ಹಿರಿಯರಾದ ಕೃಷ್ಣಯ್ಯ ಆಚಾರ್ಯ, ಮೊಗ್ರು ಮುಗೇರಡ್ಕ ಶಾಲಾ ಮುಖ್ಯ ಶಿಕ್ಷಕರಾದ ಮಾಧವ ಗೌಡ, ಮೈರೋಳ್ತಡ್ಕ ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಶಿಕ್ಷಕ ವೃಂದ, ಪೋಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವರ್ಗಾವಣೆ ಪಡೆದು ಸನ್ಮಾನ ಸ್ವೀಕರಿಸೀದ ಶಿಕ್ಷಕಿ ಸುರೇಖಾ ಇವರು ನೆನಪಿಗಾಗಿ ತಾನು ಕರ್ತವ್ಯ ನಿರ್ವಹಿಸಿದ ಮೈರೋಳ್ತಡ್ಕ ಶಾಲೆಗೆ ದೊಡ್ಡ ಬೆಲ್ ಗಂಟೆ, ಲ್ಯಾಡರ್ ಕೊಡುಗೆ ನೀಡಿದರು. ನೆರೆದವರಿಗೆಲ್ಲರಿಗೂ ಮಧ್ಯಾಹ್ನ ದ ಭೋಜನೆ ವ್ಯವಸ್ಥೆಯನ್ನು ಮಾಡಿರುತ್ತಾರೆ.

Related posts

ಕನ್ಯಾಡಿಯಲ್ಲಿ ಪ್ರತಿಷ್ಠಿತ ಸೇವಕ್ ಸರ್ವಿಸಸ್ ಶುಭಾರಂಭ

Suddi Udaya

ದ್ವಿತೀಯ ಪಿಯು ಫಲಿತಾಂಶ: ಮುಂಡಾಜೆ ಪದವಿ ಪೂರ್ವ ಕಾಲೇಜಿಗೆ ಶೇ.94.28 ಫಲಿತಾಂಶ

Suddi Udaya

ಜ.24: ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ

Suddi Udaya

ಡಾ.ಎಸ್.ಡಿ ಶೆಟ್ಟಿ ನಿಧನಕ್ಕೆ ದ. ಕ.ಜಿಲ್ಲಾ ಕ.ಸಾ.ಪ ಸಂತಾಪ

Suddi Udaya

ಡಾ.ಸುಬ್ರಹ್ಮಣ್ಯ ಭಟ್ಟರ ಮೊದಲ ಕಾದಂಬರಿ ” ಶಂಭು” ಬಿಡುಗಡೆ

Suddi Udaya

ಸುದ್ದಿ ಉದಯ ಪತ್ರಿಕೆ ಹಾಗೂ ದೀಪಾವಳಿ ವಿಶೇಷಾಂಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಚಿತ್ರನಟಿ ಶ್ರುತಿ

Suddi Udaya
error: Content is protected !!